ನವದೆಹಲಿ: ಕೆನಡಾದಲ್ಲಿ ಕಾಮೆಡಿಯನ್ ಕಪಿಲ್ ಶರ್ಮಾ ಕೆಫೆ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಶೂಟರ್ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಗೋಲ್ಡಿ ಧಿಲ್ಲೋನ್ ಗ್ಯಾಂಗ್ ಗೆ ಸೇರಿದ ಶೂಟರ್ ನನ್ನು ಬಂಧಿಸಲಾಗಿದೆ. ಮಾನ್ಸಿಂಗ್ ಸೆಖೋನ್ ಬಂಧಿತ ಆರೋಪಿ. ಕೆನಡಾದ ಸರ್ರೆಯಲ್ಲಿ ಕಪಿಲ್ ಶರ್ಮಾ ಕೆಫೆ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದ ಪಿತೂರಿಯಲ್ಲಿ ಈತ ಭಾಗಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆನಡಾದಲ್ಲಿ ಕಪಿಲ್ ಶರ್ಮಾ ಕೆಫೆ ಮೇಲೆ ಜುಲೈ ಹಾಗೂ ಅಕ್ಟೋಬರ್ ನಡುವೆ ಮೂರು ಬಾರ್ ದಾಳಿ ನಡೆದಿತ್ತು. ಅದರಲ್ಲಿ ಮೊದಲ ದಾಳಿಯಲ್ಲಿ ಆರೋಪಿಗಳಿಗೆ ಮಾನ್ಸಿಂಗ್ ಶಸ್ತ್ರಾಸ್ತ್ರ ಹಾಗೂ ವಾಹನಗಳನ್ನು ಒದಗಿಸಿದ್ದ. ಶೂಟರ್ ಬಳಸಿದ್ದ ವಾಹನವನ್ನು ಕೆನಡಾ ಪೊಲೀಸರು ಪತ್ತೆ ಮಾಡಿದ್ದಾರೆ. ಮಾನ್ಸಿಂಗ್ ಸೆಖೋನ್ ಆಗಸ್ಟ್ ನಲ್ಲಿ ಕೆನಡಾದಿಂದ ಪಲಾಯನ ಮಾಡಿ ಭಾರತಕ್ಕೆ ಮರಳಿದ್ದ ಎಂದು ತಿಳಿದುಬಂದಿದೆ.
