ಬೆಂಗಳೂರು: ಸರ್ಕಾರದಿಂದ ಟ್ರಾಫಿಕ್ ಫೈನ್ ಶೇಕಡ 50ರಷ್ಟು ರಿಯಾಯಿತಿ ನೀಡಲಾಗಿದ್ದು, ಒಂದು ವಾರದಲ್ಲಿ ಸುಮಾರು 6 ಕೋಟಿ ದಂಡ ಸಂಗ್ರಹವಾಗಿದೆ.
ನವೆಂಬರ್ 21ರಿಂದ 27ರವರೆಗೆ 5 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ. ಒಂದು ವಾರದಲ್ಲಿ 5,98,28,800 ದಂಡ ಸಂಗ್ರಹವಾಗಿದೆ. 2,25,511 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಇತ್ಯರ್ಥವಾಗಿದೆ.
ಸರ್ಕಾರ ಡಿಸೆಂಬರ್ 12ರವರೆಗೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇಕಡ 50ರಷ್ಟು ರಿಯಾಯಿತಿ ನೀಡಿದೆ.
