ಪುದುಚೇರಿ: 90 ಕೋಟಿ ಸೈಬರ್ ವಂಚನೆ ಪ್ರಕರಣದಲ್ಲಿ ನಾಲ್ವರು ಇಂಜಿನಿಯರಿಂಗ್ ಪದವೀಧರರು ಸೇರಿ 7 ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಪುದುಚೇರಿಯಲ್ಲಿ ನದೆದಿದೆ.
ಥಾಮಸ್, ಹರೀಶ್, ಗನೆಷನ್, ಗೋವಿಂದರಾಜ್, ಯಶ್ವಿನ್, ರಾಹುಲ್, ಅಯ್ಯಪ್ಪನ್ ಬಂಧಿತರು. ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿ ಆರೋಪಿಗಳು ಹಣ ವರ್ಗಾವಣೆ ಮಾಡಿಕೊಂಡಿದ್ದರು.
ಹರೀಶ್ ಎಂಬಾತ ದಿನೇಶ್ ಹಾಗೂ ಜಯಪ್ರತಾಪ್ ಎಂಬ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬ್ಯಾಂಕ್ ಖಾತೆ ವಿವರ ಪಡೆದುಕೊಂಡಿದ್ದ ಬಳಿಕ ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿ ಹಣ ವರ್ಗಾಸಿಕೊಂಡಿದ್ದ. ದಿನೇಶ್ ಹಾಗೂ ಜಯಪ್ರತಾಪ್ ತಮ್ಮ ಬ್ಯಾಂಕ್ ಖಾತೆ ಸ್ಥಗಿತಗೊಂಡಿದ್ದಕ್ಕೆ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಪರಿಶೀಲಿಸಿದಾಗ ಸೈಬರ್ ವಂಚನೆ ಜಾಲ ಪತ್ತೆಯಾಗಿದೆ.
ಇಂಜಿನಿಯರಿಂಗ್ ಕಾಲೇಜಿನ ಒಳಗೆ ಸೈಬರ್ ವಂಚಕರ ಜಾಲ ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ವಂಚಕರು ತಮ್ಮ ಖಾತೆಗೆ ಹಣ ವರ್ಗಾಯಿಸಿಕೊಂಡು ಅದರಲ್ಲಿ ಕೆಲವನ್ನು ದುಬೈ, ಚೀನಾ ನೆಟ್ ವರ್ಕ್ ಬಳಸಿ ಕ್ರಿಪ್ಟೋ ಕರೆನ್ಸಿಗೆ ವರ್ಗಾಯಿಸುತ್ತಿದ್ದರು. 20 ಕ್ಕೂ ಅಧಿಕರ ಬ್ಯಾಂಕ್ ಖಾತೆಗಳ ವಿವರ ಸಂಗ್ರಹಿಸಿ ೭ ಕೋಟಿಗೂ ಅಧಿಕ ಹಣ ಡ್ರಾ ಮಾಡಿಕೊಂಡಿದ್ದರು. ಸದ್ಯ 7 ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಿಂದ 5 ಲಕ್ಷ ನಗದು, 171 ಚೆಕ್ ಬುಕ್, 75 ಎಟಿಎಂ ಕಾರ್ಡ್, 20ಮೊಬೈಲ್, ಲ್ಯಾಪ್ ಟಾಪ್, ಕ್ರೆಡಿಟ್ ಕಾರ್ಡ್, ಹಲವು ಬ್ಯಾಂಕ್ ಗಳ ಪಾಸ್ ಬುಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.
