HomeLatest News'ST' ಸಮುದಾಯದ ಮೀನುಗಾರರಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ

‘ST’ ಸಮುದಾಯದ ಮೀನುಗಾರರಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ

ತುಮಕೂರು : ಗ್ರಾಮಾಂತರ ಜಿಲ್ಲೆಯ ಮೀನುಗಾರಿಕೆ ಇಲಾಖೆಯಿಂದ ಪ್ರಧಾನಮಂತ್ರಿ ಮತ್ಯ ಸಂಪದ ಯೋಜನೆಯಡಿ ದ್ವಿಚಕ್ರ, ತ್ರಿಚಕ್ರ ವಾಹನ ಹಾಗೂ ಜೀವಂತ ಮೀನು ಮಾರಾಟ ಮಳಿಗೆಗಾಗಿ ಸಹಾಯಧನ ಸೌಲಭ್ಯ ಕಲ್ಪಿಸಲು ಮೀನುಗಾರ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ದೊಡ್ಡಹುಲ್ಲೇನಹಳ್ಳಿ ಮಾದಾಪುರ, ಹಂದಿಗನಾಡು ಹಾಗೂ ಜಾಣೇರ್ಹಾ, ಶಿರಾ ತಾಲೂಕು ಕುಂಬಾರಹಳ್ಳಿ ಮಾರಗೊಂಡನಹಳ್ಳಿ ಗೋಪಾಲದೇವರಹಳ್ಳಿ ಗ್ರಾಪಂನ ಬಟ್ಟಿಗಾನಹಳ್ಳಿ ಸಿಡಕೋಣ, ಜೋಡಿದೇವರಹಳ್ಳಿ ಸಲುಪರಹಳ್ಳಿ; ಪಾವಗಡ ತಾಲೂಕು ದಳವಾಯಿಹಳ್ಳಿ ಹೊಸದುರ್ಗ, ಹನುಮನಬೆಟ್ಟ ರಂಗಸಮುದ್ರ, ಬೆಳ್ಳಿಬಟ್ಟು ಹನುಮಂತನಹಳ್ಳಿ ಹೊಟ್ಟೆಬೊಮ್ಮನಹಳ್ಳಿ; ಮಧುಗಿರಿ ತಾಲೂಕು ಬಸವನಹಳ್ಳಿ ವಿಟ್ಲಾಪುರ, ಗುಟ್ಟೆ ಮುತ್ಯಾಲಮ್ಮನಹಳ್ಳಿ; ಕೊರಟಗೆರೆ ತಾಲೂಕು ಹಂಚಿಹಳ್ಳಿ ತುಮಕೂರು ತಾಲೂಕು ಲಿಂಗೇನಹಳ್ಳಿ ದೊಡ್ಡವೀರನಹಳ್ಳಿ ಕುಪೂರು; ಗುಬ್ಬಿ ತಾಲೂಕು ಉಂಗನಾಳ, ಕಲ್ಲುಗುಡಿ, ಜಾಲಗುಣಿ ಹಾಗೂ ಸಾಗಸಂದ್ರ ಗ್ರಾಮದಲ್ಲಿನ ಮೀನುಗಾರರು ಮಾತ್ರ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಡಿಸೆಂಬರ್ 6 ಕಡೆಯ ದಿನ ಮಾಹಿತಿಗಾಗಿ ಆಯಾ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕ ಕಚೇರಿ ಸಂಪರ್ಕಿಸಬೇಕೆಂದು ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular