ಬೆಂಗಳೂರು : 2025-26ನೇ ಸಾಲಿಗೆ ಶಿಕ್ಷಕರ/ಉಪನ್ಯಾಸಕರ ಮಕ್ಕಳ ಉನ್ನತ ವ್ಯಾಸಂಗ ಧನಸಹಾಯ ಮಂಜೂರು ಮಾಡಲು ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
2025-26ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಸರ್ಕಾರಿ / ಅನುದಾನಿತ ಶಿಕ್ಷಕರ/ಉಪನ್ಯಾಸಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನಸಹಾಯ ಮಂಜೂರು ಮಾಡುವ ಸಲುವಾಗಿ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನದಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ದಿನಾಂಕ:01-12-2025 ರಿಂದ 31-12-2025ರವರೆಗೆ ಆಹ್ವಾನಿಸಲಾಗಿದೆ. ಶಿಕ್ಷಣ ಇಲಾಖೆಯ ಅರ್ಹ ಶಿಕ್ಷಕರು/ನಿವೃತ್ತ ಶಿಕ್ಷಕರು/ಉಪನ್ಯಾಸಕರು/ನಿವೃತ್ತ ಉಪನ್ಯಾಸಕರು/ಪ್ರಾಂಶುಪಾಲರು Online ಮೂಲಕವೇ ಕಡ್ಡಾಯವಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು.
ಉನ್ನತ ವ್ಯಾಸಂಗದ ಧನಸಹಾಯಕ್ಕಾಗಿ ಬರುವ ಭೌತಿಕ ಅರ್ಜಿಗಳನ್ನು ಈ ಕಛೇರಿಯಲ್ಲಿ ಪರಿಗಣಿಸಲಾಗುವುದಿಲ್ಲ. ಶಿಕ್ಷಕರ ಕಲ್ಯಾಣ ನಿಧಿಯ ಜಾಲತಾಣ kstbfonline karnataka gov.in URL ಅಥವಾ TBF/SWF ONLINE SERVICES ಲಿಂಕ್ ಮೂಲಕ ಅರ್ಜಿವ ಸದಸ್ಯತ್ವದ ಹೊಸ ಕಾರ್ಡ್ ಸಂಖ್ಯೆ ಪಡೆದವರು / ಹಳೆಯ ಅಜೀವ ಸದಸ್ಯತ್ವದ ಕಾರ್ಡನ್ನು ಆನ್ಲೈನ್ ಮೂಲಕ ನವೀಕರಿಸಿಕೊಂಡಿರುವ ಶಿಕ್ಷಕರು ಮಾತ್ರ ಉನ್ನತ ವ್ಯಾಸಂಗ ಧನಸಹಾಯಕ ಅರ್ಜಿ ಸಲ್ಲಿಸಬಹುದಾಗಿದೆ. ಒಂದು ಕುಟುಂಬಕ್ಕೆ ಒಬ್ಬ ವಿದ್ಯಾರ್ಥಿಗೆ ಮಾತ್ರ ಧನಸಹಾಯ ನೀಡಲಾಗುವುದು, ವಿದ್ಯಾರ್ಥಿಯ ತಂದೆ/ತಾಯಿ ಇಬ್ಬರೂ ಶಿಕ್ಷಕರು/ಉಪನ್ಯಾಸಕರಾಗಿದ್ದಲ್ಲಿ ಕುಟುಂಬಕ್ಕೆ ಒಬ್ಬರು ಮಾತ್ರ ಅರ್ಜಿ ಸಲ್ಲಿಸಲು ಮಾತ್ರ ಅವಕಾಶವಿರುತ್ತದೆ.
ಈ ಕೆಳಕಂಡ ವಿವರದಂತೆ ಅರ್ಜಿಗಳನ್ನು ಸಲ್ಲಿಸುವುದು.
- ಸೇವೆಯಲ್ಲಿರುವ ಶಿಕ್ಷಕರು ವೇತನ ಬಟವಾಡೆ ಅಧಿಕಾರಿಗಳು (ಡಿಡಿಒ) / ನಿಯಂತ್ರಣಾಧಿಕಾರಿಗಳ ಸಹಿ ಪಡೆದು ಅರ್ಜಿಗಳನ್ನು ಸಲ್ಲಿಸುವುದು. [ನಿವೃತ್ತ ಶಿಕ್ಷಕರು ಪತ್ರಾಂಕಿತ [ಗೆಜೆಟೆಡ್] ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸುವುದು]
- ಅರ್ಜಿಯಲ್ಲಿ ನಮೂದಾಗಿರುವ ಕೋರ್ಸುಗಳಿಗೆ ಮಾತ್ರ ಅರ್ಜಿ ಸಲ್ಲಿಸುವುದು.
- CA, PHD ಕೋರ್ಸುಗಳಿಗೆ ಧನಸಹಾಯ ನೀಡಲಾಗುವುದಿಲ್ಲ.
೩. ಶಿಕ್ಷಕರು ಕಡ್ಡಾಯವಾಗಿ ಸಹಿ ಮಾಡಿರಬೇಕು. - ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಉನ್ನತ ವ್ಯಾಸಂಗ ಧನಸಹಾಯಕ್ಕೆ ಅವಕಾಶ ಇರುವುದಿಲ್ಲ.
- ನಿವೃತ್ತ ಶಿಕ್ಷಕರಿಗೆ ದೃಢೀಕೃತ ಪಿಂಚಣಿ ಮಂಜೂರಾತಿ ಆದೇಶದ [ಮಹಾಲೇಖಾಪಲರಿಂದ) ಪ್ರತಿ ಕಡ್ಡಾಯವಾಗಿರುತ್ತದೆ.
- ಪತಿ/ಪತ್ನಿ ಇಬ್ಬರೂ ಅರ್ಜಿ ಸಲ್ಲಿಸಿದ್ದಲ್ಲಿ ಒಂದು ಅರ್ಜಿಯನ್ನು ಮಾತ್ರ ಪರಿಗಣಿಸಲಾಗುವುದು.
- ಶಿಕ್ಷಕರ ಮಕ್ಕಳು ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡುತ್ತರಬೇಕು.
- ಅನುತ್ತೀರ್ಣ / ಸಂಜೆ ಕಾಲೇಜು ವ್ಯಾಸಂಗದ / ಖಾಸಗಿ / w ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.


