ಮುಂಬೈ: ಬುಧವಾರದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ದರ ಮತ್ತೆ ಏರಿಕೆಯಾಗಿದೆ. 99.9ರಷ್ಟು ಪರಿಶುದ್ಧತೆಯ 10 ಗ್ರಾಂ ಚಿನ್ನದ ದರ 1200 ರೂ.ಹೆಚ್ಚಳವಾಗಿ 1,30,100 ರೂ.ಗೆ ಮಾರಾಟವಾಗಿದೆ.
ಶೇಕಡ 99.5 ರಷ್ಟು ಪರಿಶುದ್ಧತೆಯ ಆಭರಣ ಚಿನ್ನದ ದರ ಕೂಡ 1200 ರೂಪಾಯಿ ಹೆಚ್ಚಳವಾಗಿದ್ದು, 1,29,500 ರೂಪಾಯಿ ಆಗಿದೆ.
ಬೆಳ್ಳಿ ದರ ಕೆಜಿಗೆ 2300 ರೂಪಾಯಿ ಏರಿಕೆಯಾಗಿದ್ದು, 1,63,100 ರೂಪಾಯಿ ಮಾರಾಟವಾಗಿದೆ. ಫೆಡರಲ್ ರಿಸರ್ವ್ ಬಡ್ಡಿ ದರ ಕಡಿತಗೊಳಿಸುವ ನಿರೀಕ್ಷೆ, ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆಯಾಗಿರುವುದು ಬೆಲೆ ಏರಿಕೆಗೆ ಕಾರಣ ಎಂದು ಹೇಳಲಾಗಿದೆ.
