ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ಕಾರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಎನ್ಐಎ ಅಧಿಕಾರಿಗಳು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಕಾರು ಸ್ಫೋಟದ ರೂವಾರಿ ಉಗ್ರ ಡಾ.ಉಮರ್ ನಬಿಗೆ ಆಶ್ರಯ ನೀಡಿದ್ದ ಫರಿದಾಬಾದ್ ನಿವಾಸಿಯನ್ನು ಎನ್ ಐಎ ಬಂಧಿಸಿದೆ. ಬಂಧಿತನನ್ನು ಸೋಯಾಬ್ ಎಂದು ಗುರುತಿಸಲಾಗಿದೆ. ಈತ ಡಾ.ಉಮರ್ ನಬಿಗೆ ದೆಹಲಿಯಲ್ಲಿ ಕಾರು ಶೋಟಿಸುವುದಕ್ಕೂ ಮುನ್ನ ಆಶ್ರಯ ನೀಡಿದ್ದ ಎಂದು ತಿಳಿದುಬಂದಿದೆ.
ನವೆಂಬರ್ 10ರಂದು ಸಂಜೆ ದೆಹಲಿಯ ಕೆಫುಕೋಟೆಯ ಮೆಟ್ರೋ ಸ್ಟೇಷನ್ ಬಳಿ ಕಾರ್ ಬಾಂಬ್ ಸ್ಫೋಟಗೊಂಡು 15 ಜನರು ಸಾವನ್ನಪ್ಪಿದ್ದರು. ಹಲವು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರ್ ಬಾಂಬ್ ಸ್ಫೋಟದಲ್ಲಿ ವೈದ್ಯ ಉಮರ್ ಭಾಗಿಯಾಗಿದ್ದು, ಕೃತ್ಯದ ಹಿಂದೆ ವೈಟ್ ಕಾಲರ್ ಉಗ್ರರ ಕೈವಾಡವಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಈ ನಿಟ್ಟಿನಲ್ಲಿ ಎನ್ ಐಎ ತನಿಖೆ ನಡೆಸಿದೆ.
