ಮೀನುಗಾರಿಕೆ ಇಲಾಖೆ ವತಿಯಿಂದ ಮಡಿಕೇರಿ ತಾಲ್ಲೂಕಿನ ಕೃಷಿಕರಿಗೆ ಮೀನು ಕೃಷಿ ಕೊಳ, ಬಾವಿ ಮತ್ತು ಕೃಷಿ ಹೊಂಡಗಳಲ್ಲಿ ಮೀನು ಸಾಕಾಣೆಕೆ ಮಾಡಲು ಉಚಿತವಾಗಿ 500 ಸಾಮಾನ್ಯ ಗೆಂಡೆ ಮೀನು ಮರಿಗಳನ್ನು ಮತ್ತು ಗರಿಷ್ಠ 250 ಗಿಫ್ಟ್ ತಿಲಾಪಿಯ ಮೀನು ಮರಿಗಳನ್ನು ವಿತ್ತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ, ಆರ್ಟಿಸಿ, ಆಧಾರ್ ಕಾರ್ಡ್ ದಾಖಲಾತಿಗಳನ್ನು ನವೆಂಬರ್, 27 ರ ಸಂಜೆ 5.30 ಗಂಟೆಯೊಳಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಮಡಿಕೇರಿ ಐ.ಟಿ.ಐ ಜಂಕ್ಷನ್, ಕಾಲೇಜು ರಸ್ತೆ, ಮಡಿಕೇರಿ ಕಚೇರಿಗೆ ಸಲ್ಲಿಸಬಹುದು ಎಂದು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
