ಯುಜಿ ನೀಟ್ ಆಯುಷ್ ಕೋರ್ಸ್ ಗಳ ಎರಡನೇ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆ ಆರಂಭಿಸಿದ್ದು, ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ನ.27ರಂದು ಬೆಳಿಗ್ಗೆ 10ಗಂಟೆವರೆಗೆ ಅವಕಾಶ ನೀಡಲಾಗಿದೆ.
ಅದೇ ದಿನ ಮಧ್ಯಾಹ್ನ 2 ಗಂಟೆ ನಂತರ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ. ನ.28ರಂದು ಬೆಳಿಗ್ಗೆ 10 ಗಂಟೆ ನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಶುಲ್ಕ ಪಾವತಿಸಿ, ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಂಡು ನ.30ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗೆ ವೆಬ್ ಸೈಟ್ ನೋಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
#PGMedical-25: ದಾಖಲೆ ಪರಿಶೀಲನೆ ವೇಳೆ ಪರಿಶಿಷ್ಟ ಜಾತಿಯ ಒಳ ಮೀಸಲಾತಿ (SCA, SCB, SCC) ಸಂಬಂಧ ದಾಖಲೆ ಸಲ್ಲಿಸದಿರುವ ಅಭ್ಯರ್ಥಿಗಳು ನ.25 ಮತ್ತು 26 ರಂದು ಖುದ್ದು #KEA ಕಚೇರಿಗೆ ಬಂದು ಸಲ್ಲಿಸಬಹುದು.
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) November 24, 2025
ದಾಖಲೆ ಪರಿಶೀಲನೆ ವೇಳೆಗೆ ಅನೇಕರು ತಹಶೀಲ್ದಾರ್ ಅವರಿಂದ ಒಳ ಮೀಸಲಾತಿ ಕುರಿತ ಪ್ರಮಾಣ ಪತ್ರಗಳನ್ನು ಪಡೆಯಲು ಆಗಿರಲಿಲ್ಲ ಎಂದು ಅನೇಕ… pic.twitter.com/RMXmyTJacB
