ಬೆಂಗಳೂರು: ಪತಿಯ ಕಿರುಕುಳ, ಹಿಂಸೆಗೆ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಗೋವಿಂದರಾಜನಗರದಲ್ಲಿ ನಡೆದಿದೆ.
25 ವರ್ಷದ ರೇಖಾ ಮಾಯಪ್ಪ ನಂದಿ ಮೃತ ಮಹಿಳೆ. ಪತಿ ಮಾಯಪ್ಪ ರೇಖಾಳಿಗೆ ನಿರಂತರ ಹಿಂಸೆ ನೀಡುತ್ತಿದ್ದಂತೆ ವರದಕ್ಷಿಣೆ ತರುವಂತೆ ಹೊಡೆಯುತ್ತಿದ್ದನಂತೆ. ದಂಪತಿಗೆ ಇಬ್ಬರು ಮಕ್ಕಳಿದ್ದರು. ಆದರೂ ಕಿರುಕುಳ, ಹಿಂಸೆ ಮಾತ್ರ ನಿಂತಿರಲಿಲ್ಲ. ಇದರಿಂದ ಬೇಸತ್ತ ರೇಖಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪತಿ ಮಾಯಪ್ಪಜಿಬಿಎಯಲ್ಲಿ ಮಾರ್ಷಲ್ ಆಗಿ ಕೆಲಸ ಮಾಡುತ್ತಿದ್ದ. ಪ್ರತಿದಿನ ಪತ್ನಿಯೊಂದಿಗೆ ಜಗಳವಾಡುವುದು, ಮನಬಂದಂತೆ ಹೊಡೆಯುವುದು ಮಾಡುತ್ತಿದ್ದನಂತೆ. ನಾಲ್ಕು ವರ್ಷದ ಮಗು ಅಪ್ಪ, ಅಮ್ಮನಿಗೆ ಹೊಡೆಯುತ್ತಿರುವುದಾಗಿ ಕಣ್ಣೀರಿಟ್ಟಿದೆ. ಪತಿ ಚಿತ್ರಹಿಂಸೆಗೆ ನೊಂದು ರೇಖಾ ಆತ್ಮಹತ್ಯೆಗೆ ಶರಣಾಗಿದ್ದು, ಘಟನೆ ಬೆನ್ನಲ್ಲೇ ಮಾಯಪ್ಪ ನಾಪತ್ತೆಯಾಗಿದ್ದಾನೆ.
