ಬೆಂಗಳೂರು: ನೂರು ವರ್ಷ ಇತಿಹಾಸವಿರುವ ಕಾಂಗ್ರೆಸ್ ಪಕ್ಷದಲ್ಲಿ ಅವರ ಶಾಸಕರನ್ನು ಅವರೇ ಖರೀದಿ ಮಾಡುವ ಕೆಟ್ಟ ವ್ಯವಸ್ಥೆ ಬಂದಿದೆ. ಒಬ್ಬ ಶಾಸಕನಿಗೆ 100 ಕೋಟಿರೂಪಾಯುವರೆಗೂ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್ ಪಕ್ಷಕ್ಕೆ ಇಂತಹ ಸ್ಥಿತಿ ಈ ಹಿಂದೆಂಡೂ ನೋಡಿರಲಿಲ್ಲ. ಅವರ ಪಕ್ಷದ ಶಾಸಕರನ್ನು ಅವರೇ ಖರೀದಿ ಮಾಡುತ್ತಿದ್ದಾರೆ. 60-100 ಕೋಟಿವರೆಗೆ ಕೊಡುತ್ತಿದ್ದಾರೆ. ಕೊತೆಗೆ ಕಾರು, ಫ್ಲ್ಯಾಟ್ ಗಳನ್ನು ಗಿಫ್ಟ್ ಕೊಡುತ್ತಿದ್ದಾರೆ. ಮುಂದೆ ಇದನ್ನೆಲ್ಲ ಜನರ ತಲೆಮೇಲೆ ಹಾಕುತ್ತಾರೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ತಾವು ಎಐಸಿಸಿ ಅಧ್ಯಕ್ಷ ಎಂಬುದನ್ನೇ ಮರೆತಿದ್ದಾರೆ. ಹೆಸರಿಗೆ ಮಾತ್ರ ಖರ್ಗೆ ಅಧ್ಯಕ್ಷರು. ಆದರೆ ಕೀ ಇರುವುದು ಗಾಂಧಿ ಫ್ಯಾಮಿಲಿ ಬಳಿ ಎಂದು ವ್ಯಂಗ್ಯವಾಡಿದ್ದಾರೆ.
