ಬಿಹಾರ : ಬಿಹಾರದ ಪೂರ್ವ ಚಂಪಾರಣ್ (ಚಾಕಿಯಾ)ದಲ್ಲಿ ನಿರ್ಮಾಣ ಹಂತದಲ್ಲಿರುವ ವಿರಾಟ್ ರಾಮಾಯಣ ದೇವಾಲಯದಲ್ಲಿ ಬೃಹತ್ ಶಿವಲಿಂಗ ಪ್ರತಿಷ್ಟಾಪನೆಯಾಗುತ್ತಿದೆ.
ಈ ದೇವಾಲಯದಲ್ಲಿ 33 ಅಡಿ ಉದ್ದ, 210 ಟನ್ ತೂಕದ ಬೃಹತ್ ಶಿವಲಿಂಗ ಪ್ರತಿಷ್ಠಾಪನೆಯಾಗುತ್ತಿದೆ.
ವಿಶ್ವದ ಅತಿದೊಡ್ಡ ಶಿವಲಿಂಗಗಳಲ್ಲಿ ಒಂದಾದ ಈ ಬೃಹತ್ ಶಿವಲಿಂಗವು ಈಗ ತಮಿಳುನಾಡಿನ ಮಹಾಬಲಿಪುರಂನಿಂದ ಬಿಹಾರಕ್ಕೆ ತೆರಳಿದೆ. ಕಳೆದ 10 ವರ್ಷಗಳಿಂದ ಈ ಶಿವಲಿಂಗವನ್ನು ಸಿದ್ಧಪಡಿಸಲಾಗುತ್ತಿದೆ… ವಿಶ್ವದ ಅತಿದೊಡ್ಡ ಶಿವಲಿಂಗಗಳಲ್ಲಿ ಒಂದಾದ ಈ ಬೃಹತ್ ಶಿವಲಿಂಗವು ಈಗ ತಮಿಳುನಾಡಿನ ಮಹಾಬಲಿಪುರಂನಿಂದ ಬಿಹಾರಕ್ಕೆ ತೆರಳಿದೆ..
ಇದು 33 ಅಡಿ ಎತ್ತರ ಮತ್ತು 210 ಟನ್ ಗಾತ್ರ ಹೊಂದಿದೆ.
ನಿರ್ಮಾಣ ವೆಚ್ಚ: ಸುಮಾರು 3 ಕೋಟಿ ರೂಪಾಯಿಗಳು
ವಸ್ತು: ಬೃಹತ್ ಗ್ರಾನೈಟ್ ಕಲ್ಲು
ಈ ಮಹಾ ಶಿವಲಿಂಗವನ್ನು 96 ಚಕ್ರಗಳನ್ನು ಹೊಂದಿರುವ ವಿಶೇಷ ಸಾಗಣೆದಾರ ಟ್ರಕ್ನಲ್ಲಿ ಬಿಹಾರದ ಲಡ್ಕರ್ಗೆ ಕಳುಹಿಸಲಾಗುತ್ತಿದೆ. ಅಂತಹ ಭಾರವಾದ ರಚನೆಯನ್ನು ರಸ್ತೆಯ ಮೂಲಕ ಸಾಗಿಸುವುದು ಸವಾಲಿನ ಕೆಲಸವಾಗಿದೆ ಎಂದು ಹೇಳಲಾಗುತ್ತಿದೆ.
ಶಿವಲಿಂಗವನ್ನು ಕಳುಹಿಸುವ ಮೊದಲು, ಮಹಾಬಲಿಪುರದ ಪಟ್ಟಿಕಾಡು ಗ್ರಾಮದಲ್ಲಿ ಸಾಂಪ್ರದಾಯಿಕ ವೈದಿಕ ಆಚರಣೆಗಳನ್ನು ನಡೆಸಲಾಯಿತು.
ಬಿಹಾರಕ್ಕೆ ಶಿವಲಿಂಗದ ಪ್ರಯಾಣ ಸುಮಾರು 20-25 ದಿನಗಳು
ಪ್ರಯಾಣದ ವಿವರ ಹೀಗಿದೆ: ಮಹಾಬಲಿಪುರಂ → ಹೊಸೂರು ಹೊಸಕೋಟ್ ದೇವನಹಳ್ಳಿ – ಹೈದರಾಬಾದ್ – ನಿಜಾಮಾಬಾದ್ – ಆದಿಲಾಬಾದ್ ಕರ್ನೂಲ್ – ನಾಗ್ಪುರ – ಸೇವ್ನಿ ಜಬಲ್ಪುರ್ → ಮೈಹಾರ್ ಸತ್ನಾ ರೇವಾ – ಮಿರ್ಜಾಪುರ – ಅರಾ ಚಪ್ರಾ ಮಸ್ರಖ್ ಮೊಹಮ್ಮದ್ಪುರ್ – ಕೇಸರಿಯಾ ಚಕಿಯಾ (ಮೋತಿಹಾರಿ) ದಾರಿಯುದ್ದಕ್ಕೂ ಅನೇಕ ನಗರಗಳಲ್ಲಿ, ಜನರು ಈ ಬೃಹತ್ ಶಿವಲಿಂಗವನ್ನು ನೋಡಲು ಸಾಧ್ಯವಾಗುತ್ತದೆ.
