ಕಾರವಾರ: ಆನ್ ಲೈನ್ ಟ್ರೇಡಿಂಗ್ ಮೂಲಕ ಹೆಚ್ಚು ಹಣ ಗಳಿಕೆ ಆಮಿಷವೊಡ್ಡಿ ಉದ್ಯಮಿಯೊಬ್ಬರಿಗೆ 46.50 ಲಕ್ಷ ವಂಚನೆ ಮಾಡಿದ ಪ್ರಕರಣದಲ್ಲಿ ಬ್ಯಾಂಕ್ ಮ್ಯಾನೇಜರ್ ಸೇರಿ ನಾಲ್ವರನ್ನು ಬಂಧಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ.
ಫಾರೆಕ್ಸ್ ಟ್ರೇಡಿಂಗ್ ಆಪ್ ಮೂಲಕ ಹೊನ್ನಾವರದ ಉದ್ಯಮಿಯೊಬ್ಬರಿಗೆ ವಂಚಕರು 46.50 ಲಕ್ಷ ವಂಚನೆಯೆಸಗಿದ್ದರು. ಈ ಬಗ್ಗೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಫೇಸ್ ಬುಕ್ ನಲ್ಲಿ ಜಾಹೀರಾತು ನೋಡಿ ಆಪ್ ಡೌನ್ ಲೋಡ್ ಮಾಡಿಕೊಂಡಿದ್ದ ವ್ಯಕ್ತಿಗೆ ವಾತ್ಶಪ್ ಮೂಲಕ ಸಂಪರ್ಕಿಸಿ ಹಂತ ಹಂತವಾಗಿ ಹಣ ದೋಚಿದ್ದರು.
ಪ್ರಕರಣ ಸಂಬಂಧ ಮೂವರು ಬ್ಯಾಂಕ್ ಮ್ಯಾನೇಜರ್ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಎಂ.ಡಿ ಆಲಂ, ಪ್ರವೀಣ್ ಕುಮಾರ್, ವಿನಯ್ ಕುಮಾರ್ ಹಾಗೂ ಶಮೀಮ್ ಅಖ್ತರ್ ಬಂಧಿತ ಆರೋಪಿಗಳು. ಆಲಂ, ಪ್ರವೀಣ್ ಕುಮಾರ್ ಹಾಗೂ ವಿನಯ್ ಕುಮಾರ್ ಈ ಮೂವರೂ ಆರ್ ಬಿ ಎಲ್ ಬ್ಯಾಂಕ್ ನಲ್ಲಿ ರಿಲೇಶನ್ ಶಿಪ್ ಮ್ಯಾನೇಜರ್ ಗಳಾಗಿದ್ದಾರೆ ಎಂದು ತಿಳಿದುಬಂದಿದೆ.
