BIG NEWS: ಬ್ಯಾಂಕುಗಳ ರೀತಿಯಲ್ಲೇ ಸರ್ಕಾರಿ ಸ್ವಾಮ್ಯದ 3 ವಿಮಾ ಕಂಪನಿಗಳ ವಿಲೀನಕ್ಕೆ ಮುಂದಾದ ಕೇಂದ್ರ ಸರ್ಕಾರ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಸರ್ಕಾರಿ ಸ್ವಾಮ್ಯದ ಮೂರು ವಿಮಾ ಕಂಪನಿಗಳ ವಿಲೀನ ಪ್ರಸ್ತಾಪಕ್ಕೆ ಮರುಜೀವ ನೀಡಿದೆ.

ಸಣ್ಣ ಬ್ಯಾಂಕುಗಳನ್ನು ವಿಲೀನ ಮಾಡಿ ಬೃಹತ್ ಬ್ಯಾಂಕುಗಳ ಸ್ಥಾಪನೆ ಮಾಡಿದಂತೆ ಮೂರು ವಿಮಾ ಕಂಪನಿಗಳ ವಿಲೀನ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಬೃಹತ್ ಕಂಪನಿ ರಚಿಸುವ ಮತ್ತು ಅವುಗಳ ದಕ್ಷತೆಯನ್ನು ಹೆಚ್ಚಳ ಮಾಡಲು ಚಿಂತನೆ ನಡೆದಿದೆ.

2018- 19 ರಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ನ್ಯಾಷನಲ್ ಇನ್ಸೂರೆನ್ಸ್, ಒರಿಯೆಂಟಲ್ ಇನ್ಸೂರೆನ್ಸ್, ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ವಿಲೀನದ ಬಗ್ಗೆ ಪ್ರಸ್ತಾಪಿಸಿದ್ದರು. ನಂತರದ ಎರಡು ಆರ್ಥಿಕ ವರ್ಷದಲ್ಲಿ ಈ ಮೂರು ಕಂಪನಿಗಳು 17,450 ಕೋಟಿ ರೂ. ನಷ್ಟಕ್ಕೆ ಸಿಲುಕಿದ್ದವು. ನಂತರ 2020 ರಲ್ಲಿ ಸರ್ಕಾರ ವಿಲೀನ ನಿರ್ಧಾರವನ್ನು ಕೈಬಿಟ್ಟಿತ್ತು.

ಇದೀಗ ಕಂಪನಿಗಳು ಲಾಭದ ಹಳಿಗೆ ಮರಳಿರುವುದರಿಂದ ವಿಲೀನಕ್ಕೆ ಮುಂದಾಗಿದೆ. ಕೇಂದ್ರ ಸರ್ಕಾರ ಡಿಸೆಂಬರ್ 1ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ವಿಮಾ ಕಂಪನಿಗಳಲ್ಲಿ ಎಫ್.ಡಿ.ಐ. ಮಿತಿಯನ್ನು ಶೇಕಡ 74 ರಿಂದ ಶೇಕಡ 100ಕ್ಕೆ ಹೆಚ್ಚಳ ಮಾಡಲು ನಿರ್ಧರಿಸಿದೆ. ಈ ಕುರಿತಾದ ಮಸೂದೆ ಮಂಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read