HomeLatest NewsBIG NEWS: ಬಂಗಾಳಕೊಲ್ಲಿಯಲ್ಲಿ 'ಸೆನ್ಯಾರ್' ಸೈಕ್ಲೋನ್ ಭೀತಿ: ನ. 27ರವರೆಗೆ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ

BIG NEWS: ಬಂಗಾಳಕೊಲ್ಲಿಯಲ್ಲಿ ‘ಸೆನ್ಯಾರ್’ ಸೈಕ್ಲೋನ್ ಭೀತಿ: ನ. 27ರವರೆಗೆ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ

ಚೆನ್ನೈ: ಕಳೆದ ತಿಂಗಳು ಅಕ್ಟೋಬರ್ ನಲ್ಲಿ ಮೋಂಥಾ ಸೈಕ್ಲೋನ್ ಗೆ ಸಾಕ್ಷಿಯಾಗಿದ್ದ ಬಂಗಾಳಕೊಲ್ಲಿಯಲ್ಲಿ ಸೆನ್ಯಾರ್ ಹೆಸರಿನ ಚಂಡಮಾರುತ ಭೀತಿ ಉಂಟಾಗಿದೆ. ಇದರಿಂದ ನವೆಂಬರ್ 27 ರವರೆಗೆ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಪ್ರಸ್ತುತ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹ ಸಮೀಪ ಮಲಕ್ಕಾ ಜಲಸಂಧಿ ಬಳಿ ವಾಯುಭಾರ ಕುಸಿತ ಉಂಟಾಗಿದೆ. ಇದು ತೀವ್ರ ಸ್ವರೂಪ ಪಡೆದುಕೊಂಡು ಚಂಡಮಾರುತವಾಗಿ ಬದಲಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಒಂದು ವೇಳೆ ಚಂಡಮಾರುತ ರೂಪಗೊಂಡಲ್ಲಿ ಅದಕ್ಕೆ ಸೆನ್ಯಾರ್(ಸಿಂಹ) ಹೆಸರಿಡಲಾಗುವುದು. ಹಲವು ರಾಜ್ಯಗಳಲ್ಲಿ ನವೆಂಬರ್ 27ರವರೆಗೆ ಭಾರಿ ಮಳೆ ಆಗುವ ಸಾಧ್ಯತೆ ಇದೆ. ಹಿಂದೂ ಮಹಾಸಾಗರ ವೃತ್ತದಲ್ಲಿರುವ ಯುಎಎ ಈ ಬಾರಿ ಚಂಡಮಾರುತಕ್ಕೆ ಹೆಸರಿಡುವ ಅವಕಾಶ ಹೊಂದಿದ್ದು, ಚಂಡಮಾರುತಕ್ಕೆ ಸೆನ್ಯಾರ್ ಎಂದು ಹೆಸರಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular