ಮೈಸೂರು: ರಾಜ್ಯ ಕಾಂಗ್ರೆಸ್ ನಲ್ಲಿ ಕುದುರೆ ವ್ಯಾಪಾರ ಶುರುವಾಗಿ ಒಂದ ವರ್ಷವಾಗಿದೆ. ಸಿಎಂ ಸಿದ್ದರಾಮಯ್ಯನವರಿಗೆ ಅಧಿಕಾರದ ಹುಚ್ಚು ಹಿಡಿದಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಸೋಮಣ್ಣ, ರಾಜ್ಯ ಸರ್ಕಾರದ ಕುದುರೆ ವ್ಯಾಪರ ಈಗ ಅಲ್ಲ, ಕಳೆದ ಒಂದು ವರ್ಷದಿಂದ ಕುದುರೆ ವ್ಯಾಪಾರ ಶುರುವಾಗಿದೆ. ಸಿದ್ದರಾಮಯ್ಯ ಭ್ರಷ್ಟ ಸಿಎಂ ಆಗಿದ್ದಾರೆ ಎಂದರು.
ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಇಬ್ಬರೂ ಕುದುರೆ ವ್ಯಾಪಾರ ಮಾಡುತ್ತಿದ್ದಾರೆ. ಇದೊಂದು ಲಫಂಗ ಸರ್ಕಾರ. ೨೦೧೩ರಲ್ಲಿ ಇದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಕಾಣುತ್ತಿಲ್ಲ.ಈಗಿರುವುದು ಭ್ರಷ್ಟಾಚಾರ ನಡೆಸುತ್ತಿರುವ ಸಿಎಂ. ಕಾಂಗ್ರೆಸ್ ನವರು ನವೆಂಬರ್ ಕ್ರಾಂತಿ, ಬ್ರಾಂತಿಯಲ್ಲಿ ಮುಳುಗಿದ್ದಾರೆ. ಇವರಿಗೆ ಅಧಿಕಾರದ ಮದ ಏರಿದೆ. ಒಂದು ದಿನ ಇಳಿಯಲೇಬೇಕು ಎಂದು ಕಿಡಿಕಾರಿದರು.
