BIG NEWS: ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಶಿಕ್ಷಣ, ಪರಮಾಣು ಶಕ್ತಿ ಸೇರಿ 10 ಹೊಸ ಮಸೂದೆ ಮಂಡನೆ

ನವದೆಹಲಿ: ಡಿಸೆಂಬರ್ 1ರಿಂದ ಆರಂಭವಾಗಲಿರುವ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ 10 ಮಸೂದೆ ಮಂಡಿಸಲಿದೆ.

ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಮಾಡಿಕೊಂಡಿರುವ ಕಾರ್ಯಸೂಚಿ ಪಟ್ಟಿಯಲ್ಲಿನ 10 ಮಸೂದೆಗಳಲ್ಲಿ ನಾಗರಿಕ ಪರಮಾಣು ವಲಯವನ್ನು ಖಾಸಗಿ ಪಾಲದಾರರಿಗೆ ಮುಕ್ತಗೊಳಿಸುವ ಮಸೂದೆ ಕೂಡ ಸೇರಿದೆ. ಭಾರತದಲ್ಲಿ ಪರಮಾಣು ಶಕ್ತಿಯ ಬಳಕೆ ಮತ್ತು ನಿಯಂತ್ರಣದ ನಿರ್ಣಾಯಕ ಪಾತ್ರ ವಹಿಸುವ ಪರಮಾಣು ಶಕ್ತಿ ಮಸೂದೆ 2025, ಭಾರತೀಯ ಉನ್ನತ ಶಿಕ್ಷಣ ಆಯೋಗದ ಮಸೂದೆ ಕೂಡ ಕಾರ್ಯ ಸೂಚಿಯಲ್ಲಿವೆ.

ವಿಮಾ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಮಾಣವನ್ನು ಶೇಕಡ 100ಕ್ಕೆ ಹೆಚ್ಚಿಸಲು ಅವಕಾಶ ಕಲ್ಪಿಸುವ ಮಸೂದೆಯನ್ನು ಕೂಡ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ವಿಮಾ ಕಾನೂನುಗಳ ತಿದ್ದುಪಡಿ ಮಸೂದೆ ಮಂಡಿಸಲಾಗುವುದು. ಎಫ್ಡಿಐ ಮಿತಿಯನ್ನು ಈಗಿನ ಶೇಕಡ 74ರ ಬದಲು ಶೇಕಡ 100ಕ್ಕೆ ಹೆಚ್ಚಿಸುವ ಪ್ರಸ್ತಾವವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವರ್ಷದ ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದರು. ಹೊಸ ತಲೆಮಾರಿನ ಹಣಕಾಸು ಸುಧಾರಣೆಗಳ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.

ವಿಶ್ವವಿದ್ಯಾಲಯ ಧನಸಹಾಯ ಆಯೋಗದಂತಹ ಸಂಸ್ಥೆಗಳ ಬದಲು ಏಕರೂಪದ ಉನ್ನತ ಶಿಕ್ಷಣ ನಿಯಂತ್ರಣ ಆಯೋಗ ಸ್ಥಾಪಿಸುವ ಭಾರತ ಉನ್ನತ ಶಿಕ್ಷಣ ಆಯೋಗದ ಮಸೂದೆಯನ್ನು ಕೂಡ ಮಂಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read