ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ತಾತ್ಕಾಲಿಕ ಫಲಿತಾಂಶ ಪ್ರಕಟ: 8383 ಅಭ್ಯರ್ಥಿಗಳಿಗೆ ಕೆ- ಸೆಟ್ ಅರ್ಹತೆ

ಬೆಂಗಳೂರು: ನವೆಂಬರ್ 2ರಂದು ನಡೆಸಿದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(ಕೆ –ಸೆಟ್) ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಪ್ರಕಟಿಸಿದೆ.

ಯುಜಿಸಿ ಮಾರ್ಗಸೂಚಿ, ರಾಜ್ಯದ ಮೀಸಲಾತಿ ನೀತಿ ಅನುಸಾರ ಫಲಿತಾಂಶ ನೀಡಲಾಗಿದೆ. ಎಲ್ಲ ವಿಷಯಗಳು ಸೇರಿ 7263 ಸ್ಲಾಟ್ ಗಳ ಲಭ್ಯವಿದ್ದು, ಕಟ್ ಆಫ್ ನಿಯಮದ ಪ್ರಕಾರ 8383 ಅಭ್ಯರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ. 11 ಜಿಲ್ಲಾ ಕೇಂದ್ರಗಳಲ್ಲಿ 33 ವಿಷಯಗಳುಗೆ 1,34,826 ಅಭ್ಯರ್ಥಿಗಳು ಆಫ್ಲೈನ್ ನಲ್ಲಿ ಪರೀಕ್ಷೆ ಬರೆದಿದ್ದರು.

ಇವರಲ್ಲಿ 1,21,052 ಅಭ್ಯರ್ಥಿಗಳು ಪತ್ರಿಕೆ -1 ಹಾಗೂ ಪತ್ರಿಕೆ -2 ಪರೀಕ್ಷೆ ಬರೆದಿದ್ದರು. ಒಂದು ವಿಷಯದಲ್ಲಿ ಹಾಜರಾದ ಒಟ್ಟು ಅಭ್ಯರ್ಥಿಗಳ ಪೈಕಿ ಶೇಕಡ 6 ಅಭ್ಯರ್ಥಿಗಳನ್ನು ಸಹಾಯಕ ಪ್ರಾಧ್ಯಾಪಕರ ಅರ್ಹತೆಗೆ ಪರಿಗಣಿಸಲಾಗಿದೆ. ಲಭ್ಯವಾದ ಸ್ಲಾಟ್ ಗಳನ್ನು ವರ್ಗವಾರು, ವಿಷಯವಾರು ವಿಂಗಡಿಸಿ ಎರಡು ಪತ್ರಿಕೆಗಳ ಒಟ್ಟು ಅಂಕ ಆಧರಿಸಿ ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ. ದಾಖಲೆ ಪರಿಶೀಲಿಸಿದ ಬಳಿಕ ಅರ್ಹತಾ ಪ್ರಮಾಣಪತ್ರಗಳನ್ನು ನೀಡಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read