ಮಹಾರಾಷ್ಟ್ರ : ಮಹಿಳೆಯೊಬ್ಬರು ರೈಲಿನಲ್ಲಿ ಮ್ಯಾಗಿ ಬೇಯಿಸಿ, ಚಹಾ ಮಾಡಿದ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದಲ್ಲಿ ಭಾರತೀಯ ಎಕ್ಸ್ ಪ್ರೆಸ್ ರೈಲಿನ ಎಸಿ ಕೋಚ್ ಒಳಗೆ ಮಹಿಳೆ ಅಡುಗೆ ಮಾಡಿದ್ದಾಳೆ.
ಇದಕ್ಕೆ ಭಾರತೀಯ ರೈಲ್ವೆ ಶುಕ್ರವಾರ ಪ್ರತಿಕ್ರಿಯಿಸಿದ್ದು, ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದೆ.
ತನ್ನ ಬಳಿಯಿದ್ದ ವಿದ್ಯುತ್ ಒಲೆಯನ್ನು ರೈಲಿನಲ್ಲಿದ್ದ ಸಾಕೆಟ್ ಗೆ ಕನೆಕ್ಟ್ ಮಾಡಿ ಮಹಿಳೆ ಅಡುಗೆ ಮಾಡಿದ್ದಾಳೆ. ರೈಲ್ವೇ ನಿಯಮಗಳ ಪ್ರಕಾರ ಇದು ಶಿಕ್ಷಾರ್ಹ ಅಪರಾಧವಾಗಿದೆ.
ಮರಾಠಿಯಲ್ಲಿ ಮಾತನಾಡುತ್ತಿದ್ದ ಮಹಿಳೆ, ಪಕ್ಕದಲ್ಲಿ ಚಹಾ ಇಟ್ಟು ಮ್ಯಾಗಿ ಅಡುಗೆ ಮಾಡುತ್ತಿರುವುದನ್ನು ತೋರಿಸಿದರು ಮತ್ತು ತನ್ನ ಪಕ್ಕದಲ್ಲಿದ್ದ ಸಹ ಪ್ರಯಾಣಿಕರಿಗೆ ಟೀ ಕೊಟ್ಟು, ತಿಂಡಿ ಬಡಿಸಿರುವುದಾಗಿ ಹೇಳಿದರು. ಮಹಿಳೆ ಯಾವ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು ಎಂಬುದು ಸ್ಪಷ್ಟವಾಗಿಲ್ಲ.
ರೈಲ್ವೇ ಇಲಾಖೆ ಎಚ್ಚರಿಕೆ
ವೈರಲ್ ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ರೈಲ್ವೆಯು ರೈಲುಗಳಲ್ಲಿ ವಿದ್ಯುತ್ ಕೆಟಲ್ಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಹೇಳಿದೆ ಮತ್ತು ಅದು ಎಷ್ಟು ಅಪಾಯಕಾರಿ ಎಂದು ಎತ್ತಿ ತೋರಿಸಿದೆ.
“ಇದು ಬೆಂಕಿ ಅವಘಡಕ್ಕೆ ಕಾರಣವಾಗಬಹುದು ಮತ್ತು ಇತರ ಪ್ರಯಾಣಿಕರಿಗೂ ಹಾನಿಕಾರಕವಾಗಬಹುದು. ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಮತ್ತು ರೈಲಿನಲ್ಲಿರುವ ಎಸಿ ಮತ್ತು ಇತರ ಎಲೆಕ್ಟ್ರಾನಿಕ್ ಪೋರ್ಟ್ಗಳ ಅಸಮರ್ಪಕ ಕಾರ್ಯಕ್ಕೂ ಕಾರಣವಾಗಬಹುದು” ಎಂದು ಟ್ವೀಟ್ ಮಾಡಿದೆ. .
Is this train travel hack to cook food in train is okay?
— Woke Eminent (@WokePandemic) November 20, 2025
Is this legal? pic.twitter.com/tuxj9qsoHv
