ಬಾಗಲಕೋಟೆ: ಹುಚ್ಚು ನಾಯಿ ಕಡಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಅಗ್ನಿಶಾಮಕ ಠಾಣೆ ವಾಹನ ಚಾಲಕರೊಬ್ಬರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಮೊಹಮ್ಮದ್ ರಫಿಕ್ ವಾಲಿಕಾರ್ (39) ಮೃತ ದುರ್ದೈವಿ. ಮೊಹಮ್ಮದ್ ರಫಿಕ್ ಇಳಕಲ್ ಅಗ್ನಿಶಾಮಕ ಠಾಣೆಯ ವಾಹನ ಚಾಲಕರಗಿದ್ದರು. ಮೊಹಮ್ಮದ್ ರಫಿಕ್ ಅವರಿಗೆ ಹುಚ್ಚು ನಾಯಿಯೊಂದು ಕಚ್ಚಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
