ನವದೆಹಲಿ: ದುಬೈ ಏರ್ ಶೋ-2025ರಲ್ಲಿ ಭಾರತೀಯ ವಾಯುಪಡೆಯ ತೇಜಸ್ ಲಘು ಯುದ್ಧವಿಮಾನ ಪತನಗೊಂಡಿದೆ ಎಂದು ಇಂಡಿಯನ್ ಏರ್ ಫೋರ್ಸ್ ದೃಢಪಡಿಸಿದೆ.
ಇಂದು ಮಧ್ಯಾಹ್ನ 2:10ರ ಸುಮಾರಿಗೆ ದುಬೈನಲ್ಲಿ ಏರ್ ಶೋ ನಡೆಯುತ್ತಿದ್ದ ವೇಳೆಯೇ ತೇಜಸ್ ಯುದ್ಧ ವಿಮಾನ ಪತನಗೊಂಡಿದ್ದು, ನೆಲಕ್ಕಪ್ಪಳಿಸುತ್ತಿದ್ದಂತೆ ಬೆಂಕಿಗಾಹುತಿಯಾಗಿದೆ. ಘಟನೆಯಲ್ಲಿ ವಿಮಾನದ ಪೈಲಟ್ ಕೂಡ ಸಾವನ್ನಪ್ಪಿದ್ದಾರೆ. ಪೈಲಟ್ ಕುಟುಂಬದ ಜೊತೆ ನಾವಿದ್ದೇವೆ ಎಂದು ಐಎಎಫ್ ತಿಳಿಸಿದೆ.
2024ರಲ್ಲಿ ರಾಜಸ್ಥಾನದ ಜೈಸಲ್ಮೇರ್ ನಲ್ಲಿ ತೇಜಸ್ ಜೆಟ್ ಪತನಗೊಂಡಿತ್ತು. ಅಂದು ತೇಜಸ್ ದುರಂತದಲ್ಲಿ ವಿಮಾನದ ಪೈಲಟ್ ಕೂಡ ಮೃತಪಟ್ಟಿದ್ದರು. ಇದೀಗ ದುಬೈ ಏರ್ ಶೋ ವೇಳೆ ಮತ್ತೊಂದು ತೇಜಸ್ ಯುದ್ಧ ವಿಮಾನ ಪತನಗೊಂಡುದ್ದು, ಪೈಲಟ್ ಸಾವನ್ನಪ್ಪಿದ್ದಾರೆ. ತೇಜಸ್ ಇತಿಹಾಸದಲ್ಲಿ ಇದು ಎರಡನೇ ದುರಂತವಾಗಿದೆ.
