ಧಾರವಾಡ: ವ್ಯಕ್ತಿಯೋರ್ವ ವೃದ್ಧ ತಂದೆ ಹಾಗೂ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡದ ಚಿಕ್ಕಮಲ್ಲಿಗವಾಡದಲ್ಲಿ ನಡೆದಿದೆ.
ತಂದೆ ವಿಠಲರಾವ್(85) ಪುತ್ರ ನಾರಾಯಣ ಶಿಂಧೆ (42) ಮಕ್ಕಳಾದ ಶಿವರಾಜ್ (12) ಹಾಗೂ ಶ್ರೀದೇವಿ (10 ಆತ್ಮಹತ್ಯೆಗೆ ಶರಣಾದವರು. ಕೌಟುಂಬಿಕ ಕಲಹದಿಂದಾಗಿ ಸಾವಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
