ದುಬೈ: ದುಬೈ ನಲ್ಲಿ ನಡೆಯುತ್ತಿದ್ದ ಏರ್ ಶೋ ಸಂದರ್ಭದಲ್ಲಿ ಭಾರತೀಯ ಯುದ್ಧ ವಿಮಾನ ತೇಜಸ್ ಪತನಗೊಂಡಿರುವ ಘಟನೆ ನಡೆದಿದೆ.
ಹೆಚ್ ಎ ಎಲ್ ನಿರ್ಮಿತ ಭಾರತೀಯ ಯುದ್ಧ ವಿಮಾನ ಏರ್ ಶೋ ವೇಳೆ ಏಕಾಏಕಿ ಪತನಗೊಂಡಿದೆ. ಏರ್ ಶೋ ಪ್ರದರ್ಶನದ ವೇಳೆ ಇದ್ದಕ್ಕಿದ್ದಂತೆ ನೆಲಕ್ಕೆ ಅಪ್ಪಳಿಸಿದ ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡು ಉರಿದಿದೆ.
ಇಂದು ಮಧ್ಯಾಹ್ನ 2:10ರ ಸುಮಾರಿಗೆ ಆಗಸದಲ್ಲಿ ಹಾರಾಡುತ್ತಿದ್ದ ತೇಜಸ್ ಯುದ್ಧ ವಿಮಾನ ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡು ನೆಲಕ್ಕಪ್ಪಳಿಸಿದೆ. ವಿಮಾನ ಬೆಂಕಿಗಾಹುತಿಯಾಗಿದ್ದು ಪೈಲಟ್ ಸಾವನ್ನಪ್ಪಿರುವ ಶಂಕೆ ಇದೆ.ಘಟನೆಯಲ್ಲಿ ಸಾವು ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
