ಬೆಂಗಳೂರು : ನನ್ನತ್ರ ಯಾವುದೇ ಬಣ ಇಲ್ಲ, ನಾನು ಗುಂಪುಗಾರಿಕೆ ಮಾಡಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಶಾಸಕರ ದೆಹಲಿ ಯಾತ್ರೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನನ್ನತ್ರ ಯಾವುದೇ ಬಣ ಇಲ್ಲ, ನಾನು ಗುಂಪುಗಾರಿಕೆ ಮಾಡಲ್ಲ. ಗುಂಪುಗಾರಿಕೆ ಎಂಬುದು ನನ್ನ ರಕ್ತದಲ್ಲೇ ಇಲ್ಲ ಎಂದರು. ಶಾಸಕರು, ಸಚಿವರು ದೆಹಲಿಗೆ ಹೋಗುವುದರಲ್ಲಿ ತಪ್ಪೇನಿದೆ. ಅದು ಅವರ ಹಕ್ಕು. ಹೈಕಮಾಂಡ್ ಜೊತೆ ಮಾತನಾಡಲು ಅವರು ದೆಹಲಿಗೆ ಹೋಗಿದ್ದಾರೆ. ಡಿನ್ನರ್ ಮೀಟಿಂಗ್ ಗಳು ರಾಜಕೀಯದಲ್ಲಿ ನಡೆಯುತ್ತಿರುತ್ತದೆ, ಇದರಲ್ಲಿ ತಪ್ಪೇನಿದೆ ಎಂದಿದ್ದಾರೆ.
ನಾನೇ ಸಿಎಂ ಆಗಿರುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆಶಿ ‘ಸಿಎಂ ಅವರ ವಿಚಾರಧಾರೆಯನ್ನ ಹೇಳಿದ್ದಾರೆ. ಅವರಿಗೆ ನಾನು ಶುಭ ಹಾರೈಸುತ್ತೇನೆ ಎಂದಿದ್ದಾರೆ.
