ಭಟ್ಕಳ: ರೆಸಾರ್ಟ್ ನ ಈಜುಕೊಳಕ್ಕೆ ಬಿದ್ದು 5 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ.
ಜಾಲಿ ಬೀಚ್ ಬಳಿಯ ರೆಸಾರ್ಟ್ ನಲ್ಲಿ ಈ ದುರಂತ ಸಂಭವಿಸಿದೆ. ಮೊಹಮ್ಮದ್ ಮುಸ್ತಕಿಂ ಮೃತ ಬಾಲಕ. ಸ್ಥಳೀಯ ಮದ್ರಸಾ ಶಿಕ್ಷಕ ಮೌಲನಿ ಶಾಹಿದುಲ್ಲಾ ಅವರ ಪುತ್ರ ಎಂದು ಗುರುತಿಸಲಾಗಿದೆ.
ತಾಯಿ ಹಾಗೂ ತಮ್ಮನ ಜೊತೆ ಬಾಲಕ ರೆಸಾರ್ಟ್ ಗೆ ಹೋಗಿದ್ದ. ಈ ವೇಳೆ ಆಟವಾಡುತ್ತಿದ್ದ ಬಾಲಕ ಈಜುಕೊಳಕ್ಕೆ ಬಿದ್ದಿದ್ದಾನೆ. ತಕ್ಷಣ ತಾಯಿ ಮಗನನ್ನು ನೀರಿನಿಂದ ಮೇಲಕೆತ್ತಿದ್ದಾರೆ. ಆದರೂ ಬಾಲಕನ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಭಟ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
