ಬೆಂಗಳೂರು: ಪಿಜಿ ವೈದ್ಯಕೀಯ ಮೊದಲ ಸುತ್ತಿನ ಸೀಟು ಹಂಚಿಕೆಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ನ.21ರಂದು ಬೆಳಿಗ್ಗೆ 9ಗಂಟೆವರೆಗೆ ದಿನಾಂಕ ವಿಸ್ತರಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(KEA) ವೆಬ್ ಸೈಟ್ ನಲ್ಲಿ ಶುಲ್ಕದ ವಿವರಗಳನ್ನು ಕೂಡ ಅಪ್ ಲೋಡ್ ಮಾಡಿದ್ದು, ಅದನ್ನು ನೋಡಿಕೊಂಡೇ ಆಪ್ಷನ್ಸ್ ದಾಖಲಿಸುವುದು ಸೂಕ್ತ. ಕೊನೆ ಗಳಿಗೆವರೆಗೆ ಎಷ್ಟು ಬಾರಿ ಬೇಕಾದರೂ ಆಪ್ಷನ್ಸ್ ಬದಲಿಸಬಹುದು. ಆದರೆ ಅಂತಿಮವಾಗಿ ದಾಖಲಿಸುವ ಆಪ್ಷನ್ ಗಳನ್ನು ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
#PGMedical-25: ಮೊದಲ ಸುತ್ತಿನ ಸೀಟು ಹಂಚಿಕೆಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ನ.21ರಂದು ಬೆಳಿಗ್ಗೆ 9ಗಂಟೆವರೆಗೆ ದಿನಾಂಕ ವಿಸ್ತರಿಸಲಾಗಿದೆ.#KEA ವೆಬ್ ಸೈಟ್ ನಲ್ಲಿ ಶುಲ್ಕದ ವಿವರಗಳನ್ನು ಕೂಡ ಅಪ್ ಲೋಡ್ ಮಾಡಿದ್ದು ಅದನ್ನು ನೋಡಿಕೊಂಡೇ ಆಪ್ಷನ್ಸ್ ದಾಖಲಿಸುವುದು ಸೂಕ್ತ. ಕೊನೆ ಗಳಿಗೆವರೆಗೆ ಎಷ್ಟು ಬಾರಿ ಬೇಕಾದರೂ ಆಪ್ಷನ್ಸ್… pic.twitter.com/UZAvWr6Eb4
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) November 20, 2025
