ಗದಗ: ಹಿಂದೂ ಯುವಕನನೊಬ್ಬನನ್ನು ಇಬ್ಬರು ಸೇರಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿರುವ ಆರೋಪ ಕೇಳಿಬಂದಿದೆ. ಯುವಕ ಕಳೆದ ಒಂದೂವರೆ ತಿಂಗಳಿಂದ ನಾಪತ್ತೆಯಾಗಿದ್ದು, ಪೋಷಕರು ಕಣ್ಣಿರಿಟ್ಟಿದ್ದಾರೆ.
17 ವರ್ಷದ ಯುವಕನೊಬ್ಬನನ್ನು ಟೀ ಸ್ಟಾಲ್ ನಡೆಸುತ್ತಿದ್ದ ಇಬ್ಬರು ಯುವಕರು ಸೇರಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೀಶ್ವರ ಪಟ್ಟಣದ ಗವಿಸಿದ್ದಪ್ಪ ಅಲಿಯಾಸ್ ವಿನಾಯಕ ಗಣದಿನ್ನಿ ಎಂಬ 17 ವರ್ಷದ ಯುವಕ ಇಸ್ಲಾಂಗೆ ಮತಾಂತರಗೊಂಡು ನಾಪತ್ತೆಯಾಗಿದ್ದಾನೆ.
ಲಕ್ಷ್ಮೀಶ್ವರದಲ್ಲಿ ಟೀ ಸ್ಟಾಲ್ ಇಟ್ಟುಕೊಂಡಿದ್ದ ಸೋಹಲ್ ಹಾಗೂ ಗಲ್ಲು ಎಂಬ ಇಬ್ಬರು ಮಗನ ಜೊತೆ ಸ್ನೇಹ ಬೆಳೆಸಿ, ಆತನ ತಲೆಕೆಡಿಸಿ ಟೀ ಕುಡಿಯಲೆಂದು ಪ್ರತಿದಿನ ಕರೆದು ಮತಾಂತರ ಮಾಡಿದ್ದಾರೆ. ಅವರ ಮಾತು ಕೇಳಿ ಮಗ ಅವರಂತೆ ಬಟ್ಟೆ, ಟೋಪಿ ಧರಿಸುವುದು, ಕಣ್ಣಿಗೆ ಕಾಡಿಗೆ ಹಚ್ಚುವುದು ಮಾಡಲಾರಂಭಿಸಿದ್ದ. ಅವರಿಂದ ಕರೆ ಬರುತ್ತಿದ್ದಂತೆ ಎದ್ದುಬಿದ್ದು ಟೀ ಅಂಗಡಿಗೆ ಹೋಗಿ ನಿಲ್ಲುತ್ತಿದ್ದ. ಮಗನ ವರ್ತನೆ ಕಂಡು ಅಂಗಡಿಗೆ ಹೋಗಿ ಕೇಳಿದರೆ ಮಗ ನಮಗೆ ನೀವು ಯಾರೆಂದೇ ಗೊತ್ತಿಲ್ಲ, ನಾನು ಮನೆಗೆ ಬರಲ್ಲ ಎಂದು ಜಗಳವಾಡಿ ಕಳುಹಿಸಿದ್ದಾನೆ. ಕಳೆದ ಒಂದುವರೆ ತಿಂಗಳಿಂದ ಮಗ ನಾಪತ್ತೆಯಾಗಿದ್ದಾನೆ ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ. ಮಗನನ್ನು ಹುಡುಕಿಕೊಡುವಂತೆ ಪೊಲೀಸರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
