ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವವವರ ಮನೆ ಬಾಗಿಲಿನಲ್ಲಿಯೇ ಕಸ ಸುರಿದು, ದಂಡ ವಿಧಿಸಿ ಜಿಬಿಎ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಬೆಂಗಳೂರಿನ ನೆಲಮಂಗಲದಲ್ಲಿ ಅಧಿಕಾರಿಗಳ ಈ ಅಭಿಯಾನ ಉಲ್ಟಾ ಹೊಡೆದಿದೆ.
ಮನೆ ಬಳಿ ಎಷ್ಟು ದಿನವಾದರೂ ಕಸ ಸಂಗ್ರಹಿಸಲು ಬಾರದ ಕಸದ ಸಿಬ್ಬಂದಿ ಪಂಚಾಯಿತಿ ಸಿಬ್ಬಂದಿಗಳ ವಿರುದ್ಧ ನೆಲಮಂಗಲದ ಸೋಂಪುರ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದರಎ. ಅಷ್ಟೇ ಅಲ್ಲ ಸ್ಮಾಶಾನದ ಜಾಗದಲ್ಲಿ ಕಸ ಸುರಿಯುವಂತೆ ಸೋಂಪುರ ಗ್ರಾಮ ಪಂಚಾಯಿತಿ ಪಿಡಿಒ ಸೂಚಿಸಿದ್ದರಂತೆ. ಇದರಿಂದ ರೊಚ್ಚಿಗೆದ್ದ ಜನ ಗ್ರಾಮ್ ಅಪಂಚಾಯಿತಿ ಆವರಣದಲ್ಲಿ ಕಸ ತಂದು ಸುರಿದಿದ್ದಾರೆ.
ಪಂಚಾಯಿತಿ ಕಚೇರಿ ಬಾಗಿಲಲ್ಲಿ ಲೋಡ್ ಗಟ್ಟಲೆ ಕಸ ಸುರಿದು ಜನರು ಪ್ರತಿಭಟನೆ ನಡೆಸಿದ್ದಾರೆ.
