ಬೆಂಗಳೂರು : ಬೆಂಗಳೂರಲ್ಲಿ 7 ಕೋಟಿ ರೂ. ರಾಬರಿ ಕೇಸ್ ಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದು, ಸುಮಾರು 20 ಮಂದಿಯನ್ನ ವಿಚಾರಣೆ ನಡೆಸಿದ್ದಾರೆ.
ವೆಬ್ ಸೀರಿಸ್’ ನೋಡಿ ದರೋಡೆಗೆ ಸ್ಕೆಚ್.?
ದರೋಡೆ ನಡೆದ ಶೈಲಿ ನೋಡಿದರೆ..ಯಾವುದೋ ಸಿನಿಮಾ..ವೆಬ್ ಸೀರಿಸ್ ನಲ್ಲಿ ನಡೆದ ಹಾಗೆ ಇಲ್ಲಿ ನಡೆದಿದೆ. ಪಕ್ಕಾ ಪ್ಲ್ಯಾನ್ ಮಾಡಿಕೊಂಡ ಬಂದ ದರೋಡೆಕೋರರು ಹಣ ಎಗರಿಸಿದ್ದಾರೆ.ಹೌದು. ದರೋಡೆಕೋರರ ಪ್ಲ್ಯಾನ್ ಮೂರು ಠಾಣೆಗೆ ಸೇರುವ ಸ್ಥಳದಲ್ಲಿ ವಾಹನ ಬಿಡುವುದು ಆಗಿತ್ತು ಎಂಬ ಶಂಕೆ ಮೂಡಿದೆ.
ಸಿಎಂಎಸ್ ವಾಹನ ಸಿಕ್ಕಿದ ಫ್ಲೈಓವರ್ ಮೂರು ಪೊಲೀಸ್ ಠಾಣೆಗಳಿಗೆ ಬಾರ್ಡರ್ ಆಗಿದೆ. ಸಿಎಂಎಸ್ ವಾಹನ ಸಿಕ್ಕಿದ್ದ ಫ್ಲೈ ಓವರ್ ಮೂರು ಪೊಲೀಸ್ ಠಾಣೆಗಳಿಗೆ ಬಾರ್ಡರ್ ಆಗಿದೆ. ನಿಮಾನ್ಸ್ನಿಂದ ಮೇಲ್ಭಾಗಕ್ಕೆ ಬಂದರೆ ಆಡುಗೋಡಿ ಪೊಲೀಸ್ ಸ್ಟೇಷನ್, ವಾಹನದ ಎಡಬದಿಯಲ್ಲಿ ಇರುವುದು ಸುದ್ಗುಂಟೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿ ಮತ್ತು ಕೃತ್ಯ ನಡೆದಿರುವುದು ಸಿದ್ದಾಪುರ ಠಾಣೆ ವ್ಯಾಪ್ತಿಯಲ್ಲಿ. ವಾಹನ ಸಿಕ್ಕಿದ್ದು ಸುದ್ಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಪೊಲೀಸರು ಕೆಲಸ ಮಾಡುವುದು ತಮ್ಮ ಠಾಣಾ ವ್ಯಾಪ್ತಿಯಲ್ಲಿ. ಪೊಲೀಸರನ್ನು ಗೊಂದಲಕ್ಕೀಡು ಮಾಡುವುದು ದರೋಡೆಕೋರರ ಪ್ಲ್ಯಾನ್ ಆಗಿತ್ತು. ಹೀಗೆ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆರ್ ಬಿ ಎ ಅಧಿಕಾರಿಗಳ ಸೋಗಿನಲ್ಲಿ ಎಟಿಎಂಗೆ ಹಣ ಹಾಕುವ ವಾಹನ ಅಡ್ಡಗಟ್ಟಿದ ದುಷ್ಕರ್ಮಿಗಳು ಬರೋಬ್ಬರಿ 7.11 ಕೋಟಿ ಹಣ ದೋಚಿ ಪರಾರಿಯಾಗಿದ್ದಾರೆ. ಬೆಂಗಳೂರಿನ ಜಯದೇವ ಡೇರಿ ಸರ್ಕಲ್ ನಲ್ಲಿ ಈ ಘಟನೆ ನಡೆದಿದೆ. ಇನ್ನೋವಾ ಕಾರಿನಲ್ಲಿ ಬಂದ 7-8 ಮಂದಿ ದುಷ್ಕರ್ಮಿಗಳು ನಾವು ಆರ್ ಬಿ ಐ ಅಧಿಕಾರಿಗಳು ಎಂದು ವಾಹನವನ್ನ ಅಟ್ಟಗಟ್ಟಿದ್ದಾರೆ. ನಿಮ್ಮ ವಾಹನವನ್ನ ನಾವು ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದ ಗ್ಯಾಂಗ್ ಗನ್ ಮ್ಯಾನ್ ಹಾಗೂ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ಒಂದು ವಾಹನದಿಂದ ಇನ್ನೊಂದು ವಾಹನಕ್ಕೆ ಹಣ ಶಿಫ್ಟ್ ಮಾಡುತ್ತಿದ್ದಾಗ ಗ್ಯಾಂಗ್ ದರೋಡೆ ಮಾಡಿದೆ.
