BREAKING: ಧರ್ಮಸ್ಥಳ ಬುರುಡೆ ಕೇಸ್ ಷಡ್ಯಂತ್ರ: ತಿಮರೋಡಿ, ಮಟ್ಟಣ್ಣನವರ್ ಸೇರಿ 6 ಜನರ ವಿರುದ್ಧ ಇಂದು ಎಸ್ಐಟಿಯಿಂದ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನೂರಾರು ಶವ ಹೂತು ಹಾಕಲಾಗಿದೆ ಎಂದು ಅಪಪ್ರಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಎಂದು ಎಸ್ಐಟಿ ವತಿಯಿಂದ 4000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗುವುದು.

ಎಸ್ಐಟಿಯ ಮುಖ್ಯ ತನಿಖಾಧಿಕಾರಿಯಾಗಿರುವ ಜಿತೇಂದ್ರ ಕುಮಾರ್ ದಯಾಮ ಅವರು ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ. ಒಟ್ಟು ಆರು ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು. ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಟಿ. ಜಯಂತ್, ವಿಠಲ್ ಗೌಡ ಸೇರಿ ಆರು ಜನರ ವಿರುದ್ಧ ಜಾರ್ಜ್ ಶೀಟ್ ಸಿದ್ದಪಡಿಸಲಾಗಿದೆ.

ಬುರುಡೆ ತಂದಿದ್ದ ಸಿ.ಎನ್. ಚೆನ್ನಯ್ಯ, ಅದನ್ನು ತಂದುಕೊಟ್ಟವರ ಬಗ್ಗೆ ಸಂಪೂರ್ಣ ವಿವರ ಉಲ್ಲೇಖಿಸಲಾಗಿದೆ. ಧರ್ಮಸ್ಥಳದ ವಿರುದ್ಧ ಷಡ್ಯಂತ್ರಕ್ಕೆ ಪ್ರೇರಣೆ ಕೊಟ್ಟಿದ್ದು ಯಾರು? ಬುರುಡೆ ತಂದು ಕೊಟ್ಟಿದ್ದು ಯಾರು? ಎಲ್ಲಿಂದ ಬುರುಡೆ ತಂದಿದ್ದರು? ಬುರುಡೆ ವಿಚಾರದಲ್ಲಿ ಏನೇನು ಷಡ್ಯಂತ್ರ ನಡೆದಿದೆ ಎಂದು ಉಲ್ಲೇಖಿಸಲಾಗಿದೆ.

ಅಲ್ಲದೇ, ತಲೆಬುರುಡೆ ಎಲ್ಲೆಲ್ಲಿಗೆ ತೆಗೆದುಕೊಂಡು ಹೋಗಿದ್ದರು ಎನ್ನುವ ಮಾಹಿತಿ ಇದೆ. ಬುರುಡೆ ಇಟ್ಟುಕೊಂಡು ಏನೇನು ಷಡ್ಯಂತ್ರ ಮಾಡಿದ್ದರು ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read