ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ 7.11 ಕೋಟಿ ಹಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.
ತನಿಖೆ ವೇಳೆ ದರೋಡೆಕೋರರು ಪಕ್ಕಾ ಪ್ಲಾನ್ ಮಾಡಿ ಕಾರಿಗೆ ನಕಲಿ ನಂಬರ್ ಪ್ಲೇಟ್ ಬಳಸಿ ದರೋಡೆ ಮಾಡಿರುವುದು ತಿಳಿದುಬಂದ್ದೆ. ಕಲ್ಯಾಣ ನಗರದ ಸ್ವಿಫ್ಟ್ ಕಾರಿನ KA03, NC 8052 ನಂಬರ್ ನ್ನು ನಕಲಿ ಮಾಡಿ ಇನ್ನೋವಾ ಕಾರಿಗೆ ಬಳಸಿದ್ದಾರೆ ಖದೀಮರು. ನಕಲಿ ನಂಬರ್ ಪ್ಲೇಟ್ ಹಾಗೂ ದರೋಡೆಗೆ ಬಳಸಿದ್ದ ಕಾರಿನ ಮೇಲೆ ’ಗವರ್ನಮೆಂಟ್ ಆಫ್ ಇಂಡಿಯಾ’ ಎಂದು ಬರೆದುಕೊಂಡು ಪೊಲೀಸರನ್ನು, ಅಧಿಕಾರಿಗಳನ್ನು ಯಾಮಾರಿಸಿ ದರೋಡೆ ಮಾಡಲಾಗಿದೆ.
ತನಿಖೆ ನಿಟ್ಟಿನಲ್ಲಿ ಹಣ ಶಿಫ್ಟ್ ಮಾಡುತ್ತಿದ್ದ ಸಿಎಂಎಸ್ ವಾಹನ ಚಾಲಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಹಾಡಹಗಲೇ ದರೋಡೆ ಹಿನ್ನೆಲೆಯಲ್ಲಿ ನಗರಾದ್ಯಂತ ನಾಕಾಬಂಧಿ ಹಾಕಲಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ.
