ಬೆಂಗಳೂರು : ಕೋಟ್ಯಾಂತರ ರೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆ ಬೆಂಗಳೂರಿನ ಮಂತ್ರಿಮಾಲ್ ಸೀಜ್ ಮಾಡಲಾಗಿದೆ.
ಬಾಕಿ ಉಳಿಸಿಕೊಂಡ ಆಸ್ತಿ ತೆರಿಗೆ ಪಾವತಿಸಿದ ಹಿನ್ನೆಲೆ ಮಲ್ಲೇಶ್ವರಂ ನಲ್ಲಿರುವ ಬೆಂಗಳೂರಿನ ಮಂತ್ರಿಮಾಲ್ ಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ಪ್ರತಿನಿತ್ಯ ಕೋಟ್ಯಾಂತರ ರೂಪಾಯಿ ವಹಿವಾಟು ನಡೀತಿದ್ರು ತೆರಿಗೆ ಕಟ್ಟೋಕೆ ಮಂತ್ರಿಮಾಲ್ ಕಳ್ಳಾಟ ಆಡ್ತಿದೆ. ಈ ಕಳ್ಳಾಟಕ್ಕೆ ಜಿಡಿಎ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ.ಕಳೆದ ಹಲವು ವರ್ಷಗಳಿಂದ ತೆರಿಗೆ ಪಾವತಿಸದೆ ಮಂತ್ರಿ ಮಾಲ್ ಗೆ ಬೀಗ ಬಿದ್ದಿತ್ತು, ಇದೀಗ ಬರೋಬ್ಬರಿ 30,81,45,600 ರೂ ತೆರಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆ ಇಂದು ಬೆಳಗ್ಗೆ ಮಾಲ್ ಸೀಜ್ ಮಾಡಿ ನೋಟಿಸ್ ನೀಡಿದ್ದಾರೆ.
