ಮೈಸೂರು: ಮನೆಯಿಂದ ಬಹುಕಾಲ ದೂರವಿರುತ್ತಿದ್ದ ಯಕ್ಷಗಾನ ಕಲಾವಿದರಲ್ಲಿ ಅನೇಕರು ಸಲಿಂಗಿಗಳಾಗಿದ್ದರು. ಅಲ್ಲಿ ಅಂತಹ ಅನಿವಾರ್ಯತೆ ಇತ್ತು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಮೈಸೂರಿನ ಮಾನಸ ಗಂಗೋತ್ರಿ ಪ್ರಸರಾಂಗದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಯಕ್ಷಗಾನ ಕಲಾವಿದರು ಯಕ್ಷಗಾನ ಮೇಳಕ್ಕೆಂದು ಆರೇಳು ತಿಂಗಳು ತಿರುಗಾಟದಲ್ಲಿ ಇರುತ್ತಿದ್ದರು. ಮನೆ, ಪತ್ನಿ, ಮಕ್ಕಳಿನಿಂದ ದೂರ ಇರುತ್ತಿದ್ದ ಈ ಕಲಾವಿದರಿಗೆ ಯಾರೂ ಹೆಣ್ಣು ಕೊಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಮೇಳದಲ್ಲಿ ಸ್ತ್ರೀ ವೇಷಧಾರಿಗಳ ಮೇಲೆ ಒತ್ತಡ ಇರುತ್ತಿತ್ತು. ಅವರ ಮೇಲೆ ಇತರರಿಗೆ ಮೋಹ ಇರುತ್ತಿತ್ತು. ಎಷ್ಟೋ ಬಾರಿ ಸ್ತ್ರೀ ವೇಷದ ಕಲಾವಿದ ಏನಾದರೂ ಸಲಿಂಗ ಕಾಮಕ್ಕೆ ನಿರಾಕರಿಸಿದಲ್ಲಿ ಭಾಗವತರು ಮರುದಿನ ಅವರಿಗೆ ಪದ್ಯವನ್ನೇ ಕೊಡುತ್ತಿರಲಿಲ್ಲ. ರಂಗದ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದರು, ಅವರಿಗೆ ಅವಕಾಶ ಇಲ್ಲದಂತಾಗುತ್ತಿತ್ತು. ಕಲೆಯನ್ನೇ ನಂಬಿರುವ ಇಂತಹ ಕಲಾವಿದರು ಜೀವನ ಸಾಗಿಸಲು ಒತ್ತಡದಲ್ಲಿ ಇರುತ್ತಿದ್ದರು. ಇಂತಹ ಸತ್ಯವನ್ನು ಒಪ್ಪಿಕೊಳ್ಳಬೇಕಿದೆ ಎಂದು ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
