ಬೆಂಗಳೂರು: ಮೇಕೆದಾಟು ಯೋಜನೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ವರದಿಯ ಬಗ್ಗೆ ಚರ್ಚಿಸಿದ್ದೇವೆ ಎಂದು ಜಲ ಸಂಪನ್ಮೂಲ ಸಚಿವರಾಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೇಕೆದಾಟು ಕುಡಿಯುವ ನೀರಿನ ಯೋಜನೆ ಬಗ್ಗೆ ಡಿಪಿಆರ್ ಸಲ್ಲಿಸಲಾಗಿತ್ತು. ಮೊದಲು ಸಲ್ಲಿಸಿದ ಡಿಪಿಆರ್ ಹಿಂಪಡೆದು ಹೊಸದಾಗಿ ಸಲ್ಲಿಸಬೇಕಿದೆ. ಹೊಸದಾಗಿ ಡಿಪಿಆರ್ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಿದೆ. ಅರಣ್ಯ ಪ್ರದೇಶ ಎಷ್ಟು ಮುಳುಗಡೆ ಆಗುತ್ತದೆ ಎಂದು ವರದಿ ಕೊಡಬೇಕಿದೆ ಎಂದರು.
ಹಾರೋಬೆಲೆಯಲ್ಲಿ ಪ್ರತ್ಯೇಕ ಕಚೇರಿ ತೆರೆಯಬೇಕಿದೆ. ರಾಮನಗರದಲ್ಲಿ ಮುಖ್ಯ ಕಚೇರಿ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ. ಮಂಡ್ಯ, ರಾಮನಗರಕ್ಕೆ ಹತ್ತಿರವಾಗುವಂತೆ ಮುಖ್ಯ ಕಚೇರಿ ಮಾಡಲಿದ್ದೇವೆ. ಮುಖ್ಯ ಕಚೇರಿಗೆ ಅಗತ್ಯ ಸಿಬ್ಬಂದಿ ನೇಮಕ ಮಾಡಲು ಸಿದ್ಧತೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಈ ಹಿಂದಿನ ಡಿಪಿಆರ್ ತಿರಸ್ಕರಿಸಿದ್ದರಿಂದ ಹೊಸದಾಗಿ ಡಿಪಿಆರ್ ಮಾಡಬೇಕಿದೆ. ಕಾನೂನಿನ ವ್ಯಾಪ್ತಿಯಲ್ಲಿ ಎಲ್ಲಿ ಡಿಪಿಆರ್ ಮಂಡಿಸಬೇಕೋ ಅಲ್ಲಿ ಮಂಡಿಸುತ್ತೇವೆ. ಕಾನೂನು ಪ್ರಕಾರ ಕೇಂದ್ರ ಸರ್ಕಾರಕ್ಕೆ ಹೊಸ ಡಿಪಿಆರ್ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.
