ಬೆಳಗಾವಿ: ಬೆಳಗಾವಿಯ ಆಜಾದ್ ನಗರದಲ್ಲಿ ಮೂವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ರಿಹಾನ್, ಸರ್ಫರಾಜ್ ಹರಪ್ಪನಹಳ್ಳಿ, ಮೋಹಿನ್ ನಲಬಂದ ಸಾವನ್ನಪ್ಪಿದ್ದಾರೆ.
ಮೃತ ಮೂವರಿಗೆ 22 ವರ್ಷ ವಯಸ್ಸಾಗಿದೆ. 19 ವರ್ಷದ ಶಹಾನವಾಜ್ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯಲ್ಲಿ ಮಲಗಿದ್ದವರು ನಿಗೂಢವಾಗಿ ಮೃತಪಟ್ಟಿದ್ದಾರೆ.
ಬೆಂಕಿಯ ಹೊಗೆಯಿಂದ ಮನೆಯಲ್ಲೇ ಉಸಿರುಗಟ್ಟಿ ಮೂವರು ಮೃತಪಟ್ಟಿದ್ದಾರೆ. ಚಳಿ ಕಾಯಿಸಲು ಹಾಕಿದ ಬೆಂಕಿ ಹೊಗೆಯಿಂದ ಸಾವನ್ನಪ್ಪಿದ್ದಾರೆ. ಬೆಂಕಿಯ ಜೊತೆಗೆ ಸೊಳ್ಳೆ ಬತ್ತಿಯನ್ನು ಕೂಡ ಹಾಕಲಾಗಿತ್ತು. ಹೊಗೆ ಹೋಗಲು ಕಿಟಕಿ ಓಪನ್ ಇಲ್ಲದ ಕಾರಣ ರೂಮಿನ ತುಂಬಾ ಹೊಗೆ ಆವರಿಸಿ ಮೂವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮಾಳಮಾರುತಿ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
You Might Also Like
TAGGED:ಬೆಳಗಾವಿ
