ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಹತ್ಯೆ ನಡೆದಿದೆ. ಸೋದರ ಮಾವನ ಜೊತೆ ಸೇರಿ ಪತ್ನಿಯೇ ಪತಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ.
ಬೆಂಗಳೂರಿನ ಅಂಧ್ರಹಳ್ಳಿಯ ಮಂಜುನಾಥ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. 65 ವರ್ಷದ ವೆಂಕಟೇಶ್ ಕೊಲೆಯಾದ ದುರ್ದೌವಿ. ಪಾರ್ವತಿ ಪತಿಯನ್ನೇ ಕೊಂದ ಮಹಿಳೆ. ಸೋದರ ಮಾವ ರಂಗಸ್ವಾಮಿ ಜೊತೆ ಸೇರಿ ಪತಿಯನ್ನೇ ಹತ್ಯೆಗೈದಿದ್ದಾಳೆ.
ವೆಂಕಟೇಶ್ 10 ವರ್ಷಗಳ ಹಿಂದೆ ಮೊದಲ ಪತ್ನಿಯನ್ನು ಬಿಟ್ತಿದ್ದನಂತೆ. 6 ವರ್ಷಗಳ ಹಿಂದೆ ಪಾರ್ವತಿ ಎಂಬುವವರನ್ನು ಎರಡನೇ ವಿವಾಹವಾಗಿದ್ದ. ಪಾರ್ವತಿ ಮನೆಯನ್ನು ತನ್ನ ಹೆಸರಿಗೆ ಬರೆಯುವಂತೆ ಕೇಳಿದ್ದಳಂತೆ. ಮನೆ ತನ್ನ ಹೆಸರಿಗೆ ಬರಿ ಇಲ್ಲವಾದಲ್ಲಿ 6 ಲಕ್ಷ ರೂಪಾಯಿ ಕೊಡು ಎಂದು ಹೇಳಿದ್ದಳಂತೆ. ಎರಡೂವರೆ ಲಕ್ಷ ಕೊಡುತ್ತೇನೆ ಎಂದು ಪತಿ ವೆಂಕಟೇಶ್ ಹೇಳಿದ್ದನಂತೆ. ಇದಕ್ಕೆ ಪತ್ನಿ ಒಪ್ಪಿಲ್ಲ. ಪತಿಯ ಹುಚ್ಚಾಟಗಳಿಗೆ ಬೇಸತ್ತ ಪತ್ನಿ ಸಹೋದರ ಮಾವನ ಜೊತೆ ಸೇರಿ ಪತಿಯನ್ನು ಬರ್ಬರವಾಗಿ ಕೊಲೆಗೈದಿದ್ದಾಳೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
