ನವದೆಹಲಿ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಪ್ರಕರಣದಲ್ಲಿ ರಿಲಯನ್ಸ್ ಸಮೂಹದ ಮುಖ್ಯಸ್ಥ ಅನಿಲ್ ಅಂಬಾನಿ ಎರಡನೇ ಬಾರಿಗೆ ಇಡಿ ವಿಚಾರಣೆಗೆ ಗೈರಾಗಿದ್ದಾರೆ.
ಶುಕ್ರವಾರ ಇಡಿ ವಿಚಾರಣೆಗೆ ಗೈರಾಗಿದ್ದ ಅನಿಲ್ ಅಂಬಾನಿ ಅವರಿಗೆ ಇಂದು ಖುದ್ದು ಹಾಜರಾಗುವಂತೆ ಇಡಿ ಮತ್ತೊಂದು ನೋಟಿಸ್ ನೀಡಿತ್ತು. ವರ್ಚುವಲ್ ಮೂಲಕ ವಿಚಾರಣೆಗೆ ಹಾಜರಾಗುವುದಾಗಿ ಅನಿಲ್ ಅಂಬಾನಿ ಹೇಳಿದ್ದರು. ಆದರೆ ಇಡಿ ಅವರ ಮನವಿಯನ್ನು ತಿರಸ್ಕರಿಸಿತ್ತು. ಇಂದು ಇಡಿ ವಿಚಾರಣೆಗೆ ಅನಿಲ್ ಅಂಬಾನಿ ಹಾಜರಾಗಿಲ್ಲ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಇಡಿ ಮೂರನೇ ಬಾರಿಗೆ ಅನಿಲ್ ಅಂಬಾನಿ ಅವರಿಗೆ ಸಮನ್ಸ್ ಜಾರಿ ಮಾಡಲಿದೆಯೇ? ಎಂಬುದು ಕುತೂಹಲ ಮೂಡಿಸಿದೆ.
ಜೈಪುರ-ರಿಂಗಸ್ ಟೋಲ್ ಹೆದ್ದಾರಿ ಯೋಜನೆಗೆ ಸಂಬಂಧಿಸಿದಂತೆ ಅನಿಲ್ ಅಂಬಾನಿ ವಿರುದ್ಧ ಇಡಿ ಪ್ರಕರಣ ದಾಖಲಿಸಿಕೊಂಡಿತ್ತು.
