ಬೆಂಗಳೂರು : ಸೋಶಿಯಲ್ ಮೀಡಿಯಾದಲ್ಲಿ ಬರುವ ಜಾಹೀರಾತುಗಳ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು.ಇಲ್ಲವಾದಲ್ಲಿ ಇಂತಹ ಘಟನೆ ನಡೆಯುತ್ತದೆ.ಮಹಿಳೆಯೊಬ್ಬರು ಮಗಳನ್ನ ಮಾಡೆಲ್ ಮಾಡಲು ಹೋಗಿ 3.74 ಲಕ್ಷ ರೂ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಗಳನ್ನ ಮಾಡೆಲಿಂಗ್ ಮಾಡುವ ಆಸೆಗೆ ಬಿದ್ದು ಸುಮಾ 3.74 ಲಕ್ಷ ಹಣ ಕಳೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಂದಂತಹ ಚೈಲ್ಡ್ ಮಾಡೆಲ್ ಆಡ್ ನೋಡಿದ್ದರು. ಈ ಲಿಂಕ್ ಫೇಸ್ ಬುಕ್ ಪೇಜ್ ನಲ್ಲಿ ಬಂದಿತ್ತು.
ಈ ಲಿಂಕ್ ಕ್ಲಿಕ್ ಮಾಡಿದಾಗ ಲಿಂಗ್ ಮೂಲಕ ವಂಚಕರು ಮಗುವಿನ ಮಾಹಿತಿ ಪಡೆದು ಅಡ್ಮೀಷನ್ ಮಾಡಿದಂತೆ ನಾಟಕ ಮಾಡಿದ್ದಾರೆ. ನಂತರ ಲಿಂಕ್ ಮೂಲಕ ಟೆಲಿಗ್ರಾಂ ಗ್ರೂಪಿಗೆ ಸೇರಿಕೊಳ್ಳಿ ಎಂದು ಮತ್ತೊಂದು ಲಿಂಕ್ ಸೆಂಡ್ ಮಾಡಿದ್ದರು. ಹಲವು ಪ್ರಕ್ರಿಯೆಗಳ ಬಳಿಕ ವಂಚಕ 11,000 ರೂ ಕಳುಹಿಸಲು ಹೇಳಿದ್ದಾನೆ. ನಂತರ 19 ಸಾವಿರ ವಾಪಸ್ ನೀಡಿದ್ದಾನೆ. ಬಳಿಕ ಸೈಬರ್ ಖದೀಮರು ಹಂತ ಹಂತವಾಗಿ ಮಹಿಳೆಯ ಖಾತೆಯಿಂದ 3.74 ಲಕ್ಷ ರೂ ದೋಚಿದ್ದಾರೆ. ನಂತರ ಮೋಸ ಹೋದೆ ಎಂದು ತಿಳಿದ ಮಹಿಳೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
