ಗುಜರಾತ್ನ ಭಾವನಗರ ನಗರದಲ್ಲಿ ಸೀರೆಗಾಗಿ ಜಗಳವಾಡಿದ ನಂತರ ಮದುವೆಗೆ ಒಂದು ಗಂಟೆ ಮೊದಲು ವಧುವನ್ನು ವರ ಕೊಲೆ ಮಾಡಿದ್ದಾನೆ.
ಶನಿವಾರ ಜೋಡಿ ಮದುವೆಯಾಗುವ ಒಂದು ಗಂಟೆ ಮೊದಲು ಅವರ ಮನೆಯೊಳಗೆ ಘಟನೆ ನಡೆದಿದೆ. ವರನಿಂದಲೇ ವಧು ಕೊಲೆಯಾಗಿದ್ದಾಳೆ. ಪ್ರಭುದಾಸ್ ಸರೋವರದ ಟೆಕ್ರಿ ಚೌಕ್ ಬಳಿ ಈ ಘಟನೆ ಜೋಡಿಯ ನಡುವೆ ಸೀರೆ ಮತ್ತು ಹಣದ ಬಗ್ಗೆ ನಡೆದ ಜಗಳದ ವೇಳೆ ನಡೆದಿದೆ.
ಪೊಲೀಸರ ಪ್ರಕಾರ, ಆರೋಪಿ ಸಜನ್ ಬರಯ್ಯ ಮತ್ತು ಬಲಿಪಶು ಸೋನಿ ಹಿಮ್ಮತ್ ರಾಥೋಡ್ ಕಳೆದ ಒಂದೂವರೆ ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದರು. ಅವರ ನಿಶ್ಚಿತಾರ್ಥವಾಗಿತ್ತು ಮತ್ತು ಹೆಚ್ಚಿನ ಆಚರಣೆಗಳು ಪೂರ್ಣಗೊಂಡಿದ್ದವು. ಶನಿವಾರ ರಾತ್ರಿ ಅವರು ಮದುವೆಯಾಗಬೇಕಿತ್ತು.
ಆದಾಗ್ಯೂ, ಮದುವೆಗೆ ಕೇವಲ ಒಂದು ಗಂಟೆ ಮೊದಲು ಸೀರೆ ಮತ್ತು ಹಣದ ಬಗ್ಗೆ ಇಬ್ಬರ ನಡುವೆ ವಾಗ್ವಾದ ನಡೆಯಿತು. ಕೋಪದಿಂದ, ಸಜನ್ ಕಬ್ಬಿಣದ ಪೈಪ್ ನಿಂದ ಸೋನಿಗೆ ಹೊಡೆದು, ಆಕೆಯ ತಲೆಯನ್ನು ಗೋಡೆಗೆ ಗುದ್ದಿಸಿ ಕೊಲೆ ಮಾಡಿದ್ದಾನೆ. ಆರೋಪಿಗಳು ಮನೆಯನ್ನು ಧ್ವಂಸ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಮಾಹಿತಿ ಪಡೆದ ನಂತರ, ಪೊಲೀಸ್ ತಂಡವು ಪರಿಸ್ಥಿತಿಯನ್ನು ಅವಲೋಕಿಸಿದೆ.
ಈ ಜೋಡಿ ತಮ್ಮ ಕುಟುಂಬಗಳ ವಿರೋಧದ ನಡುವೆಯೂ ಒಟ್ಟಿಗೆ ವಾಸಿಸುತ್ತಿದ್ದರು. ಅವರು ಒಂದೂವರೆ ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದರು. ನಿನ್ನೆ ಅವರ ಮದುವೆ ಆಗಿತ್ತು. ಸೀರೆ ಮತ್ತು ಹಣದ ವಿಷಯಕ್ಕೆ ಇಬ್ಬರ ನಡುವೆ ಜಗಳವಾಗಿತ್ತು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಆರ್.ಆರ್. ಸಿಂಘಾಲ್ ಹೇಳಿದರು.
ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ವಿವರವಾದ ತನಿಖೆ ನಡೆಯುತ್ತಿದೆ” ಎಂದು ಅವರು ಹೇಳಿದ್ದಾರೆ.
