BIG NEWS: ಆರ್.ಎಸ್.ಎಸ್ ತೆರಿಗೆ ವಂಚನೆ,KKRDBಯಿಂದ ಲೂಟಿ ಬಗ್ಗೆ ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ: ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ

ಕಲಬುರಗಿ: ನೋಂದಣಿಯೇ ಆಗದ ಸಂಸ್ಥೆ ಆರ್.ಎಸ್.ಎಸ್ ದೇಣಿಗೆ ರೂಪದಲ್ಲಿ ಲೂಟು ಮಾಡುತ್ತಿದೆ. ತೆರಿಗೆ ವಂಚನೆ ಮಾಡುತ್ತಿದೆ. ಆರ್.ಎಸ್.ಎಸ್ ನ ತೆರಿಗೆ ವಂಚನೆಯನ್ನು ದಾಖಲೆಗಳ ಸಮೇತ ಬಿಡುಗಡೆ ಮಾಡುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಗುಡುಗಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ನಾವು ಆರ್.ಎಸ್.ಎಸ್.ಪಥಸಂಚಲನಕ್ಕೆ ವಿರೋಧ ಮಾಡಿಲ್ಲ. ಆದರೆ ಅನುಮತಿ ಪಡೆದುಕೊಳ್ಳಬೇಕು ಎಂದು ಹೇಳಿದ್ದೆವು. ಚಿತ್ತಾಪುರದಲ್ಲಿ ಆರ್.ಎಸ್.ಎಸ್ ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ ಕೊಟ್ಟವರು ನಾವು. ಯಾವ ರೀತಿ ಪಥಸಂಚಲನ ನಡೆಯಬೇಕು? ಎಷ್ಟು ಜನರು ಭಾಗವಹಿಸಬೇಕು? ಭಾಗಿಯಾಗುವ ಗಣವೇಷಧಾರಿಗಳ ಮಾಹಿತಿ ನೀಡಬೇಕು. ಪಥಸಂಚಲನ ಮಾರ್ಗ ಎಲ್ಲಿಂದ ಎಲ್ಲಿಯವರೆಗೆ ಇರಬೇಕು ಎಂಬ ಬಗ್ಗೆ ಹೇಳಿದವರು ನಾವು. ಇದರಲ್ಲಿ ಗೊಂದಲವೇನಿದೆ? ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಅನಗತ್ಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಚಿತ್ತಾಪುರದ ಪಥಸಂಚಲನಕ್ಕೆ 3 ಲಕ್ಷ ಜನ ಬರ್ತಾರೆ ಅಂದ್ರು. ಬಂದ್ರಾ? ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಆರ್.ಅಶೋಕ್, ಘಟಾನುಘಟಿ ನಾಯಕರು ಬರ್ತಾರೆ ಅಂದ್ರು. ಬಂದ್ರಾ? ಯಾವುದೇ ಪ್ರಮುಖ ನಾಯಕರೂ ಇಲ್ಲ ಪಥಸಂಚನ ಆರಂಭವಗಿದೆ ಎಂದರು.

ದೇವಾಲಯದ ಹುಂಡಿ ಹಣವನ್ನು ಲೆಕ್ಕ ಕೊಡಲಾಗುತ್ತದೆ. ಅಂತಾದ್ದರಲ್ಲಿ ಆರ್.ಎಸ್.ಎಸ್ ಗೆ ಹೋಗುವ ಹಣವನ್ನು ಯಾಕೆ ಲೆಕ್ಕ ಕೊಡುತ್ತಿಲ್ಲ. ಆರ್.ಎಸ್. ಎಸ್ ನಿಂದ ತೆರಿಗೆ ವಂಚನೆ ಮಾಡಲಾಗುತ್ತಿದೆ. ಕೆ.ಕೆ.ಆರ್.ಡಿ.ಬಿಯಿಂದಲೂ ಆರ್.ಎಸ್.ಎಸ್ ಲೂಟಿ ಮಾಡುತ್ತಿದೆ. ಎಷ್ಟು ಲೂಟಿ ಮಾಡುತ್ತಿದೆ ಏನು ಎಂಬುದನ್ನು ಇನ್ನು ಹದಿನೈಡು ದಿನಗಳಲ್ಲಿ ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ. RSS ಇವರಿಗೆ ಯಾರೆಲ್ಲ ದೇಣಿಗೆ ಕೊಡ್ತಾರೆ? ಹೇಗೆಲ್ಲಾ ಕೊಡ್ತಾರೆ ಎಲ್ಲವೂ ದಾಅಖಲೆ ಸಮೇತ ಹೊರಬರಲಿದೆ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read