ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 7ನೇ ಚಿತ್ರದ ಮಹೂರ್ತ ನೆರವೇರಿದೆ. ಬಾಲಿವುಡ್ ನಿರ್ಮಾಪಕ ಗೋಲ್ಡ್ ಮೈನ್ಸ್ ಮನೀಶ್ ಅವರು ಮೊದಲ ಬಾರಿಗೆ ಕನ್ನಡ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಬಿಗ್ ಬಜೆಟ್ ಮೂಲಕ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಮಾಡಲಾಗುತ್ತಿದ್ದು. ಇನ್ನೂ ಟೈಟಲ್ ಅಂತಿಮ ಆಗಿಲ್ಲ. ‘ಕೆರೆ ಬೇಟೆ’ ಸಿನಿಮಾ ಖ್ಯಾತಿಯ ರಾಜಗುರು ಈ ಚಿತ್ರವನ್ನು ನಿರ್ದೇಶಸಲಿದ್ದಾರೆ. ಗೋಲ್ಡ್ ಮೈನ್ಸ್ ಮನೀಶ್ ಸಿನಿಮಾ ನಿರ್ಮಾಣ ಸಂಸ್ಥೆಯ ಮೊದಲ ಕನ್ನಡ ಸಿನಿಮಾ ಇದಾಗಿದ್ದು, DS07 ಎಂದು ಸದ್ಯಕ್ಕೆ ಚಿತ್ರಕ್ಕೆ ಹೆಸರಿಡಲಾಗಿದೆ. ಕನ್ನಡದ ನೆಲದ ಕಥೆ ಹೊಂದಿರುವ ಇದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿ ಬರಲಿದೆ.
