ಯಾದಗಿರಿ: ಯಾದಗಿರಿ ತಾಲೂಕಿನ ನಾಗರಬಂಡಾ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.
ಯಾದಗಿರಿ ತಾಲೂಕಿನ ನಾಗರಬಂಡಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಅಲ್ಲಾವುದ್ದೀನ್ ಅವರನ್ನು ಅನುದಾನ ದುರ್ಬಳಕೆ ಆರೋಪದಡಿ ಅಮಾನತು ಮಾಡಲಾಗಿದೆ.
ಶಾಲೆಗೆ ಅನಧಿಕೃತವಾಗಿ ರಜೆ ಘೋಷಣೆ, ಎಸ್.ಡಿ.ಎಂ.ಸಿ. ಅಧ್ಯಕ್ಷರ ಸಹಿ ನಕಲು ಮಾಡಿ ಅನುದಾನ ದುರ್ಬಳಕೆ, ಬಾಳೆಹಣ್ಣು ಮತ್ತು ಮೊಟ್ಟೆ ವಿತರಣೆಯಲ್ಲಿ ಮಕ್ಕಳ ಸುಳ್ಳು ಹಾಜರಾತಿ ನಮೂದಿಸಿದ ಆರೋಪದಡಿ ಅಲ್ಲಾವುದ್ದೀನ್ ವಿರುದ್ಧ ದೂರು ದಾಖಲಾಗಿತ್ತು. ಪರಿಶೀಲನೆ ನಡೆಸಿದ ಅಧಿಕಾರಿಗಳು ಅವರನ್ನು ಅಮಾನತು ಮಾಡಲಾಗಿದೆ.
