ಬೆಂಗಳೂರು: ಕಾರು ರಿವರ್ಸ್ ತೆಗೆಯುವಾಗ ಒಂದೂವರೆ ವರ್ಷದ ಮಗುವಿನ ಮೇಲೆ ಕಾರು ಹರಿದು ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರುನ ಮಾದನಾಯಕನಹಳ್ಳಿಯಲ್ಲಿ ನಡೆದಿದೆ.
ಕಾರಿನ ಚಕ್ರಕ್ಕೆ ಸಿಲುಕಿ ಒಂದೂವರೆ ವರ್ಷದ ಮಗ ನೂತನ್ ಸಾವನ್ನಪ್ಪಿದ್ದಾನೆ. ತೋಟದ ಗುಡ್ದದಹಳ್ಳಿಯ ಬೆನಕ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಮೋಹನ್ ಎಂಬುವವರ ಮಗ ನೂತನ್ ಮೃತ ಕಂದಮ್ಮ.
ನಿನ್ನೆ ಬೆಳಿಗ್ಗೆ ಮೋಹನ್ ಮನೆಗೆ ಅವರ ಅಕ್ಕ-ಭಾವ ಬಂದಿದ್ದರು. ಇಂದು ರಸ್ತೆ ಪಕ್ಕದಲ್ಲಿ ಮಗು ಆಟವಾಡುತ್ತಿದ್ದಾಗ ಮಗುವನ್ನು ಗಮನಿಸದೇ ಕಾರನ್ನು ಚಾಲಕ ರಿವರ್ಸ್ ತೆಗೆದಿದ್ದಾನೆ. ಕಾರಿನ ಚಕ್ರದಡಿ ಸಿಲುಕಿದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಮಗುವನ್ನು ಕಳೆದುಕೊಂಡ ತಂದೆ-ತಾಯಿ ಆಕ್ರಂದನ ಮುಗಿಲುಮುಟ್ಟಿದೆ.
