ಕಲಬುರಗಿ: ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಇಂದು ಆರ್.ಎಸ್.ಎಸ್ ಪಥಸಂಚನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪಥಸಂಚನ ನಡೆಯುವ ಮಾರ್ಗಗಳಲ್ಲಿ ಸಿಸಿಟ್ವಿ ಕಣ್ಗಾವಲು ಹಾಕಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.
ಪಥಸಂಚಲನದಲ್ಲಿ 300 ಗಣವೇಷಧಾರಿಗಳು ಹಾಗೂ 50 ಬ್ಯಾಂಡ್ ಸಿಬ್ಬಂದಿಗಳಿಗೆ ಮಾತ್ರ ಷರತ್ತು ಬದ್ಧ ಅನುಮತಿ ನೀಡಲಾಗಿದೆ. ಇಂದು ಮಧ್ಯಾಹ್ನ 3:30ರಿಂದ ಬಜಾಜ್ ಕಲ್ಯಾಣ ಮಂಟಪದಿಂದ ಪಥಸಂಚಲನ ಆರಂಭವಾಗಲಿದೆ. ಸುಮಾರು ಒಂದುವರೆ ಕಿ.ಮೀವರೆಗೆ ಪಥಸಂಚಲನ ಸಾಗಲಿದೆ.
ಪೊಲೀಸರ ಕಾರ್ಯಕ್ಕೆ ಯಾವುದೇ ಅಡ್ಡಿಪಡಿಸದಂತೆ ಜಿಲ್ಲಾಡಳಿತ ಸೂಚಿಸಿದೆ. ಚಿತ್ತಾಪುರದಲ್ಲಿ ಆರ್.ಎಸ್.ಎಸ್ ಪಥಸಂಚಲನ ವಿವಾದ ರಾಷ್ಟ್ರಪಟ್ಟದಲ್ಲಿ ಸುದ್ದಿಯಾಗಿತ್ತು. ಇದ್ಗ ಜಿಲ್ಲಾಡಳಿತ ಷರತ್ತುಬದ್ಧ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಪಥಸಂಚಲನ ನಡೆಯುತ್ತಿದೆ.
