ಹೈದರಾಬಾದ್: ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಹೊಸ ಚಿತ್ರಕ್ಕೆ ವಾರಣಾಸಿ ಎಂದು ಹೆಸರಿಡಲಾಗಿದೆ.
ಹೈದರಾಬಾದ್ ನ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯುತ್ತಿರುವ ಗ್ಲೋಬ್ ಗ್ಲೋಬ್ ಟ್ರಾಟರ್ ಕಾರ್ಯಕ್ರಮದಲ್ಲಿ ಎಸ್.ಎಸ್. ರಾಜಮೌಳಿ ಮತ್ತು ಮಹೇಶ್ ಬಾಬು ಅವರ SSMB29 ಸಿನಿಮಾಕ್ಕೆ ‘ವಾರಣಾಸಿ’ ಎನ್ನುವ ಟೈಟಲ್ ಅನಾವರಣ ಮಾಡಲಾಗಿದೆ.
ಅಪಾರ ಸಂಖ್ಯೆಯಲ್ಲಿ ಸೇರಿದ ಜನರ ನಡುವೆ ಬೃಹತ್ ಎಲ್ಇಡಿ ಪರದೆಯಲ್ಲಿ ‘ವಾರಣಾಸಿ’ ಚಿತ್ರದ ಶೀರ್ಷಿಕೆ ಮತ್ತು ಮಹೇಶ್ ಬಾಬು ಅವರ ಫಸ್ಟ್ ಲುಕ್ ಅನಾವರಣಗೊಳಿಸಲಾಗಿದೆ. ಬೃಹತ್ ನಂದಿಯನ್ನು ಏರಿ ಮಹೇಶ್ ಬಾಬು ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಮಹೇಶ್ ಬಾಬು, ಪೃಥ್ವಿರಾಜ್ ಸುಕುಮಾರನ್, ಪ್ರಿಯಾಂಕಾ ಚೋಪ್ರಾ ಮೊದಲಾದವರು ಅಭಿನಯಿಸಿದ್ದಾರೆ. ರಾಜಮೌಳಿಯವರ ತಂದೆ ವಿಜಯೇಂದ್ರ ಪ್ರಸಾದ್ ಚಿತ್ರಕ್ಕೆ ಕಥೆ ಬರೆದಿದ್ದಾರೆ.
Inka chalu 😭😭😭😭😭😭😭#GlobeTrotter #Varanasi #MaheshBabu #Rajamouli pic.twitter.com/C8PMhE0VuW
— Ravi (@ravi_2809) November 15, 2025
#Varanasi 🔱🔥
— Filmy Tollywood (@FilmyTwoodOffl) November 15, 2025
https://t.co/ASPz1UCvaP
