ಬೆಂಗಳೂರು: ಕೆಲಸ ಕೊಟ್ಟ ಮಾಲೀಕನಿಗೆ ಚಾಕುವಿನಿಂದ ಇರಿದು ಚಿನದ ಚೈನ್ ದೋಚಿ ವ್ಯಕ್ತಿಯೋರ್ವ ಪರಾರುಯಾಗಿರುವ ಘಟನೆ ಬೆಂಗಳೂರಿನ ಕುಂಬಳಗೋಡು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗಣೇಶ್ ಮೂರ್ತಿಗಳನ್ನು ತಯಾರಿಸುವ ಕಾರ್ಖಾನೆ ಮಾಲೀಕ ಅಮರ್ ನಾರಾಯಣಸ್ವಾಮಿ ಚಾಕು ಇರಿತಕ್ಕೊಳಗಾದವರು. ಜಯಂತ್ (23) ಮಾಲೀಕನ ಮೇಲೆ ಹಲ್ಲೆ ನಡೆಸಿದ ಯುವಕ. ಅಮರ್ ಅವರ ಕುತ್ತಿಗೆ, ಭುಜ, ಹಾಗೂ ಹಣೆಯ ಭಾಗದಲ್ಲಿ ಚಾಕು ಇರಿದಿದ್ದು, ಅವರ ಕತ್ತಿನಲ್ಲಿದ್ದ ಚಿನ್ನದ ಚೈನ್ ದೋಚಿ ಆರೋಪಿ ಎಸ್ಕೇಪ್ ಆಗಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಮರ್ ಅವರ ಕಾರ್ಖಾನೆಯಲ್ಲಿಯೇ ಆರೋಪಿ ಜಯಂತ್ ಕೆಲಸ ಮಾಡುತ್ತಿದ್ದ. ಮೂರು ದಿನಗಳ ಹಿಂದೆ ಕೆಲಸ ಬಿಟ್ಟು ಹೋಗಿದ್ದ. ಎರಡು ಬಿಡಿಎ ಸೈಟ್ ಗಳು ಕಡಿಮೆ ಬೆಲೆಗೆ ಮಾರಾಟಕ್ಕಿವೆ. ಅದನ್ನು ನೋಡಿಕೊಂಡು ಬರೋಣ ಎಂದು ಮಾಲೀಕ ಅಮರ್ ಗೆ ಹೇಳಿದ್ದ. ಆರೋಪಿಯನ್ನು ಕಾರಿನಲ್ಲಿ ಕರೆದುಕೊಂಡು ಸೈಟ್ ನೋಡಿ ವಾಪಾಸ್ ಆಗುವಾಗ ಕಾರಿನ ಹಿಂಭಾಗದ ಸೀಟ್ ನಲ್ಲಿ ಕುಳಿತಿದ್ದ ಆರೋಪಿ ಅಮರ್ ಅವರ ಕತ್ತಲ್ಲಿದ್ದ ಚಿನ್ನದ ಚೈನ್ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಇದಕ್ಕೆ ಅಮರ್ ವಿರೋಧಿಸುತ್ತಿದಂತೆ ಚಾಕುವಿನಿಂದ ಇರಿದಿದ್ದಾನೆ. ಕಾರನ್ನು ನಿಲ್ಲಿಸಿ ಕಾರಿನಿಂದ ಇಳಿದ ಅಮರ್ ತಪ್ಪಿಸಿಕೊಂಡು ಓಡಿದ್ದಾರೆ. ಈ ವೇಳೆ ಅವರನ್ನು ಹಿಂಭಾಲಿಸಿ ಚೈನ್ ಕಿತ್ತುಕೊಂಡು ಮತ್ತೆ ಚಾಕುವಿಂದ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಈ ಬಗ್ಗೆ ಗಾಯಾಳು ಅಮರ್ ಪೊಲೀಸರಿಗೆ ದೂರು ನೀಡಿದ್ದಾರೆ.
