BIG NEWS : ರಾಜ್ಯದ ಆಶಾ ಕಾರ್ಯಕರ್ತೆಯರ ಕರ್ತವ್ಯಗಳೇನು..? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು :   ಆಶಾ ಕಾರ್ಯಕರ್ತೆಯರು (ASHA – Accredited Social Health Activist) ಸಮುದಾಯದ ಆರೋಗ್ಯ ರಕ್ಷಣೆಗಾಗಿ ತರಬೇತಿ ಪಡೆದ ಮಹಿಳಾ ಆರೋಗ್ಯ ಕಾರ್ಯಕರ್ತರು. ಅವರು ಭಾರತ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್‌ನ ಒಂದು ಭಾಗವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಮತ್ತು ಅವುಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.  ಪ್ರತಿ ಆಶಾ ಕಾರ್ಯಕರ್ತೆಯು ಸರಾಸರಿ 250-300 ಕುಟುಂಬಗಳ ಜೊತೆ ನಿಕಟ ಸಂಪರ್ಕವನ್ನು ಹೊಂದಿದ್ದು, ಕೆಳಕಂಡ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ.

ಆಶಾ ಕಾರ್ಯಕರ್ತೆಯು ಕೆಳಕಂಡ ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ

1. ಮನಭೇಟಿ

2. ಆರೋಗ್ಯ ಸಂಸ್ಥೆಗಳಿಗೆ ಭೇಟಿ ನೀಡುವುದು.

3. ತನ್ನ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಜಾಗೃತಿ ಸಭೆಗಳನ್ನು ಸಂಘಟಿಸುವುದು

4. ಆರೋಗ್ಯ ದಾಖಲೆಗಳನ್ನು ನಿರ್ವಹಿಸುವುದು.

5. ಆರೋಗ್ಯ ಸಮಾಲೋಚನ ಮತ್ತು ಮಾಹಿತಿ, ಶಿಕ್ಷಣ ಮತ್ತು ಸಂವಹನ ಕರ್ತವ್ಯಗಳು

6. ಮಹಿಳೆಯರು ಮತ್ತು ಕುಟುಂಬದವರಿಗೆ ಆಪ್ತ ಸಮಾಲೋಚನ

ಹೆರಿಗೆಯ ಸಿದ್ಧತೆ

ಸುರಕ್ಷಿತ ಹೆರಿಗೆಯ ಪ್ರಾಮುಖ್ಯತ

* ಸ್ತನ್ಯ ಪಾನದ ಪ್ರಾಮುಖ್ಯತೆ

ಲಸಿಕ

ಗರ್ಭನಿರೋಧಕಗಳ ಮಹತ್ವ

ಲೈಂಗಿಕ ಸೋಂಕುಗಳನ್ನು ತಡೆಗಟ್ಟುವಿಕ

7. ತನ್ನ ಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಗರ್ಭಿಣಿ ಮತ್ತು ಮಗುವಿನ (24 ತಿಂಗಳ ಒಳಗಿನ) ವಿವರಗಳನ್ನು ಆರ್.ಸಿ.ಹೆಚ್ ಜಾಲತಾಣದಲ್ಲಿ ಪ್ರತಿ ತಿಂಗಳು ತಪ್ಪದೇ ನಮೂದಿಸಲು ಅಗತ್ಯ ಮಾಹಿತಿಯನ್ನು ಆಶಾ ಸುಗಮಕಾರರಿಗೆ ಚಟುವಟಿಕೆ ನಡೆದ 48 ಗಂಟೆಗಳ ಒಳಗೆ ಸಲ್ಲಿಸುವುದು. ಈ ಚಟುವಟಿಕೆಗಳೆಂದರ 12 ವಾರದೊಳಗೆ ನೋಂದಣಿ, ನಾಲ್ಕು ಪ್ರಸವಪೂರ್ವ ಪರೀಕ್ಷೆ, ಟಿ.ಟಿ. ಚುಚ್ಚು ಮದ್ದು, ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಗುಳಿಗಗಳನ್ನು ಕೂಡಿಸಿರಬೇಕು.

8. ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಲ್ಲಾ ತೊಡಕಿನ ಗರ್ಭಧಾರಣೆಗಳನ್ನು ಆರ್.ಸಿ.ಹೆಚ್ ಜಾಲತಾಣದಲ್ಲಿ ಗರ್ಭಿಣಿ ಆರೈಕೆ ಮತ್ತು ಹರಿಗೆಗೆ ಸಂಬಂಧಿಸಿದ ವಿವರಗಳನ್ನು ನಮೂದಿಸಲು ಆಶಾ ಸುಗಮಕಾರರಿಗೆ ಸಲ್ಲಿಸತಕ್ಕದ್ದು.

9. ಖಾಸಗಿ ಆರೋಗ್ಯ ಸಂಸ್ಥೆಯಲ್ಲಿ ಆಗುವ ಹೆರಿಗೆಗಳನ್ನು ಆರ್.ಸಿ.ಹೆಚ್ ಜಾಲತಾಣದಲ್ಲಿ ನೋಂದಣಿ ಮಾಡಿಸುವುದು.

ಹುಟ್ಟಿದಾಗ ಕಡಿಮೆ ತೂಕದ ಹಾಗೂ ಎಸ್‌ಎನ್‌ಸಿಯು ನಿಂದ ಬಿಡುಗಡೆಗೊಂಡ ಮಕ್ಕಳ ಮನೆಗೆ ಭೇಟಿ ನೀಡಿ (ಪ್ರತಿ ಮೂರು ತಿಂಗಳಿಗೊಮ್ಮೆ) ತೂಕವನ್ನು ಅಳೆಯುವುದು, ಎದೆಹಾಲುಣಿಸುವಿಕೆಯನ್ನು ಖಾತ್ರಿಪಡಿಸಿಕೊಳ್ಳುವುದು.

11. ಪ್ರಾಥಮಿಕ ಆರೋಗ್ಯ ಕೇಂದ್ರದ ಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ, ಗ್ರಾಮ ಆರೋಗ್ಯ ಮತ್ತು ಪೌಷ್ಟಿಕಾಂಶ ದಿನಾಚರಣೆಯನ್ನು ಪ್ರತಿ ತಿಂಗಳ ಮೂರನೇ ಶನಿವಾರದಂದು ಮತ್ತು ತಿಂಗಳ ಮೊದಲನೇ ಸೋಮವಾರ ದಂದು ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕಾಂಶ ಸಮಿತಿ ಸಭೆಯನ್ನು ನಡೆಸಿರಬೇಕು.

12. ಆಶಾ ಕಾರ್ಯಕ್ಷೇತ್ರದಲ್ಲಿ ನಿರಂತರ ಚಟುವಟಿಕೆಗಳಾದ ಗ್ರಾಮ ಆರೋಗ್ಯ ಪುಸ್ತಕ ನಿರ್ವಹಣೆ, ಗರ್ಭಿಣಿಯರ ಪಟ್ಟಿ ನಿರ್ವಹಣೆ, ಲಸಿಕಾ ಕಾರ್ಯಕ್ರಮಕ್ಕೆ ಮಕ್ಕಳ ಪಟ್ಟಿ, ಅರ್ಹ ದಂಪತಿಗಳ ಪಟ್ಟಿ, ಮನೆ ಮನೆ ಸಮೀಕ್ಷೆಗಳನ್ನು ನಡೆಸಿ ಕೌಟುಂಬಿಕ ದಾಖಲೆಗಳನ್ನು ತಪ್ಪದೇ ಸಂಗ್ರಹಿಸಬೇಕು. ಆರು ತಿಂಗಳಿಗೊಮ್ಮೆ ಈ ಕೌಟುಂಬಿಕ ದಾಖಲೆಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಸಲ್ಲಿಸಬೇಕು.

13. ಚುಚ್ಚುಮದ್ದು ಸೇವೆಗಳಿಗೆ ಫಲಾನುಭವಿಗಳನ್ನು ಕರೆತರುವುದು.

14. ಹದಿಹರೆಯದ ಹೆಣ್ಣು ಮಕ್ಕಳ ಆರೋಗ್ಯದ ಅನುಸರಣೆ.

15. ಮೊದಲ ಮತ್ತು ಎರಡನೇಯ ಬಾರಿ ಹೆರಿಗೆಯಾದ ಬಾಣಂತಿಯರಿಗೆ 48 ಗಂಟೆಗಳ ಒಳಗಾಗಿ ಪಿಪಿಐಯುಸಿಡಿ ಅಳವಡಿಸಲು ಉತ್ತೇಜಿಸಬೇಕು. (ಶೇ.10 ರಿಂದ 25 ರಷ್ಟು ಬಾಣಂತಿಯರು).

16. ಸಾರ್ವತ್ರಿಕ ಆರೋಗ್ಯ ಪಾಲನೆಯ (ಯು.ಹೆಚ್.ಸಿ.) ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು.

17. ಆಶಾ ಕಾರ್ಯಕರ್ತೆಯ ಕ್ಷೇತ್ರ ವ್ಯಾಪ್ತಿಯಲ್ಲಿ 15-49 ವರ್ಷಗಳ ನಡುವಿನ ವಯೋಮಿತಿಯ ಎಲ್ಲಾ ಮಹಿಳೆಯರ ಮರಣದ ಪ್ರಕರಣಗಳನ್ನು ದಾಖಲಿಸಿ ಮರಣ ಘಟಿಸಿದ 24 ಘಂಟೆಯೊಳಗೆ ತಾಲ್ಲೂಕು ಆರೋಗ್ಯ ಅಧಿಕಾರಿಗಳಿಗೆ ನಿಗದಿತ ನಮೂನೆಯಲ್ಲಿ ವರದಿ ಮಾಡುವುದು.

18. ಶಿಶು ಮರಣ ವರದಿ

19. ಎನ್.ಸಿ.ಡಿ ಚಟುವಟಿಕೆಗಳು.

20. ಸಾಂಕ್ರಾಮಿಕ ರೋಗಗಳ ನಿಯಂತ್ರಣಾ ಚಟುವಟಿಕೆಗಳು.

21 ಕ್ಷಯ ರೋಗಿಗಳನ್ನು ಗುರುತಿಸುವಿಕ ಮತ್ತು ಆರೈಕ.

22. ಕುಷ್ಠ ರೋಗಿಗಳನ್ನು ಗುರುತಿಸುವಿಕೆ ಮತ್ತು ಆರೈಕೆ.

23. ಕಾಲಕಾಲಕ್ಕೆ ಸರ್ಕಾರವು ವಹಿಸುವ ಸಾಮಾಜಿಕ ಆರೋಗ್ಯ ಸೂಚಕಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಕಡ್ಡಾಯವಾಗಿ ನಿರ್ವಹಿಸುವುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read