ಬೆಂಗಳೂರು: ನಂದಿ ತುಪ್ಪದ ಬ್ರ್ಯಾಂಡ್ ಹೆಸರಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಸಿಸಿಬಿ ಪೊಲೀಸರು ಬೇಧಿಸಿದ್ದಾರೆ. ಪ್ರಕರಣ ಸಾಬಂಧ ಡಿಸ್ಟ್ರೀಬ್ಯೂಟರ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಕೆ ಎಂ ಎಫ್ ಡಿಸ್ಟ್ರಿಬ್ಯೂಟರ್ ಮಹೇಂದ್ರ ಎಂಬಾತ ಒಪಿಜಿನಲ್ ನಂದಿನಿ ತುಪ್ಪವನ್ನು ಖರೀದಿಸುತ್ತಿದ್ದ. ಹೀಗೆ ಖರೀದಿಸಿದ ತುಪ್ಪವನ್ನು ತಮಿಳುನಾಡಿಗೆ ಕೊಂಡೊಯ್ದು ಅದನ್ನೆ ನಕಲಿ ತುಪ್ಪವನ್ನು ಬೆರೆಸಿ, ನಂದಿನಿ ತುಪ್ಪದ ಬ್ರ್ಯಾಂಡ್ ಲೇಬಲ್ ಗಳನ್ನು ಅಂಟಿಸಿ ನಕಲಿ ತುಪ್ಪವನ್ನು ಆರೋಪಿಗಳು ಮಾರಾಟ ಮಾಡುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ಸಿಸಿಬಿ ವಿಶೇಶ ವಿಚಾರಣಾ ದಳ ಹಾಗೂ ಕೆ ಎಂಎಫ್ ಜಾಗೃತ ದಳ ಜಂಟಿ ಕಾರ್ಯಾಚರಣೆ ನಡೆಸಿ ನಕಲಿ ತುಪ್ಪ ತಯಾರಿಸುತ್ತಿದ್ದ ತಮಿಳುನಾಡಿನ ಯೂನಿಟ್ ಮೇಲೆ ದಾಳಿ ನಡೆಸಿದೆ. ಈ ವೇಳೆ ಡಿಸ್ಟ್ರಿಬ್ಯೂಟರ್ ಮಹೇಂದ್ರ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಆರೋಪಿಗಳಿಂದ ನಾಲ್ಕು ವಾಹನಗಳನ್ನು ಹಾಗೂ ಒಂದು ಮೆಷಿನ್ ಯುನಿಟ್ ಗಳನ್ನು ಜಪ್ತಿ ಮಾಡಿದ್ದಾರೆ. ಅಲ್ಲದೇ 1.26 ಕೋಟಿ ಮೌಲ್ಯದ ನಕಲಿ ತುಪ್ಪವನ್ನು ವಶಕ್ಕೆ ಪಡೆಯಲಾಗಿದೆ.
