ಶಿವಮೊಗ್ಗ : ನೇಣು ಬಿಗಿದುಕೊಂಡು ಪದವಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿ ಸಮೀಪದ ಬಚ್ಚನಕೊಡಿಗೆಯಲ್ಲಿ ನಡೆದಿದೆ.
ಮೃತರನ್ನ ಬಚ್ಚನಕೊಡಿಗೆಯ ರಮೇಶ್ ಆಚಾರ ಅವರ ಪುತ್ರಿ ಪ್ರಾಪ್ತಿ (21) ಎಂದು ಗುರುತಿಸಲಾಗಿದೆ.
ಈಕೆ ತೀರ್ಥಹಳ್ಳಿಯ ಬಾಳೆಬೈಲು ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದರು. ಆತ್ಮಹತ್ಯೆಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಈ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
