GOOD NEWS : ‘ಪೊಲೀಸ್ ಹುದ್ದೆ’ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ರಾಜ್ಯದಲ್ಲಿ 3500 ‘ಕಾನ್ಸ್ಟೇಬಲ್’ ನೇಮಕಾತಿಗೆ  ಸರ್ಕಾರ ಆದೇಶ.!

ಬೆಂಗಳೂರು : ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ ಎಂಬಂತೆ ರಾಜ್ಯದಲ್ಲಿ 3500 ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗೆ ಸರ್ಕಾರ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಿವಿಧ ನಗರ/ಜಿಲ್ಲಾ ಪೊಲೀಸ್ ಘಟಕಗಳಲ್ಲಿ ಕಲ್ಯಾಣ ಕರ್ನಾಟಕೇತರ ಮೀಸಲಾತಿಯಡಿಯಲ್ಲಿ ರಿಕ್ತವಿರುವ ಒಟ್ಟು 3500 ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳನ್ನು (ಸಿಪಿಸಿ) ನೇರ ನೇಮಕಾತಿಯ ಮೂಲಕ ಭರ್ತಿಮಾಡಲು ಉಲ್ಲೇಖಿತ ಪತ್ರದಲ್ಲಿ ಸರ್ಕಾರವು ಅನುಮತಿ ನೀಡಿರುತ್ತದೆ.

ಆದ್ದರಿಂದ, ಸರ್ಕಾರದ ಉಲ್ಲೇಖಿತ ಪತ್ರವನ್ನು ಹಾಗೂ ಸದರಿ ಪತ್ರದಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡಿರುವ 3500 ಕಲ್ಯಾಣ ಕರ್ನಾಟಕೇತರ ಮೀಸಲಾತಿಯ ನಾಗರೀಕ ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗಳನ್ನು ಇಲಾಖೆಯ ವಿವಿಧ ನಗರ/ಜಿಲ್ಲಾ ಘಟಕಗಳಿಗೆ ಹಂಚಿಕೆಮಾಡಿರುವ ಸಂಖ್ಯಾವಾರು ವಿವರವನ್ನು ಅನುಬಂಧ-ಅ ರಲ್ಲಿ ತಯಾರಿಸಿ ಈ ಪತ್ರದೊಂದಿಗೆ ಲಗತ್ತಿಸಿದೆ. ಸರ್ಕಾರವು ನೇರ ನೇಮಕಾತಿಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ನೀಡಿರುವ ನಿರ್ದೇಶನಗಳು ಹಾಗೂ ಪೊಲೀಸ್ ಇಲಾಖೆಯ ನೇರ ನೇಮಕಾತಿಯಲ್ಲಿ ಸಮತಳ ಮೀಸಲಾತಿ, ಕ್ರೀಡಾ ಮೀಸಲಾತಿ ಮತ್ತು ತೃತೀಯ ಲಿಂಗದ ಅಭ್ಯರ್ಥಿಗಳ ನೇಮಕಾತಿಗೆ ಸಂಬಂಧಿಸಿದಂತೆ ಉಲ್ಲೇಖ-2 ರಿಂದ 6 ರ ಪತ್ರಗಳಲ್ಲಿ ನೀಡಿರುವ ನಿರ್ದೇಶನಗಳಂತೆ ಸಂಬಂಧಪಟ್ಟ ಘಟಕಗಳಿಂದ ನೇರ ಹಾಗೂ ಸಮತಳ ವರ್ಗೀಕರಣವನ್ನು ಸ್ಪಷ್ಟ ಬ್ಯಾಕ್ಲಾಗ್ ವಿವರಗಳೊಂದಿಗೆ ಪಡೆದು ಸದರಿ ಹುದ್ದೆಗಳ ನೇಮಕಾತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಸಲು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ ಹಾಗೂ ತೃತೀಯ ಲಿಂಗದ ಅಭ್ಯರ್ಥಿಗಳ ಮೀಸಲಾತಿ ಹಾಗೂ ನೇಮಕಾತಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ವಿವರವನ್ನು ಈ ಪತ್ರದೊಂದಿಗೆ ಲಗತ್ತಿಸಿ ಕಳುಹಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read